ಬಿಜೆಪಿ ಸಂಸದ ಅನುರಾಗ್ ಠಾಕೂರ್ ನಮೋ ವಿಶೇಷ ಜಾಕೆಟ್ ಧರಿಸಿ ಸಂಸತ್ ಗೆ ತೆರಳಿದ್ದು, ಇದನ್ನು ನೋಡಿ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯಿಸಿದ್ದಾರೆ. ಅನುರಾಗ್ ಠಾಕೂರ್ ಅವರಿಗೆ ಲುಕಿಂಗ್ ಗುಡ್ ಎಂದು ಕಮೆಂಟ್ ಮಾಡಿದ್ದಾರೆ.
ನವದೆಹಲಿ : ಬಿಜೆಪಿ ಸಂಸದ ಅನುರಾಗ್ ಠಾಕೂರ್ ಸಂಸತ್ ಗೆ ವಿಶೇಷ ಉಡುಪು ಧರಿಸಿ ತೆರಳಿದ್ದರು. ಅದರಲ್ಲಿ ಎರಡು ಪದಗಳನ್ನು ಬರೆಯಲಾಗಿತ್ತು. ಇದನ್ನು ನೋಡಿದ ಪ್ರಧಾನಿ ಗುಡ್ ಲುಕಿಂಗ್ ಎಂದು ಕಮೆಂಟ್ ಮಾಡಿದ್ದಾರೆ.
ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಈ ಹೊತ್ತಿನಲ್ಲಿ, ಮಂಗಳವಾರ ಸಂಸತ್ ಗೆ ತೆರಳಿದ್ದ ವೇಳೆ ನಮೋ ಅಗೈನ್ ಎಂಬ ಎರಡು ಪದಗಳಿದ್ದ ಜಾಕೆಟ್ ಧರಿಸಿ ತೆರಳಿದ್ದರು. ಅಲ್ಲದೇ ಈ ಜಾಕೆಟ್ ಧರಿಸಿದ್ದ ಫೊಟೊವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪ್ರಕಟಿಸಿ, ಇತರ ಬಿಜೆಪಿ ಸಂಸದರಿಗೂ ಕೂಡ ಈ ಚಾಲೆಂಜ್ ನೀಡಿದರು.
ತಮ್ಮ ಟ್ವಿಟರ್ ಖಾತೆಯಲ್ಲಿ ಈ ಫೊಟೊವನ್ನು ಕಿರಣ್ ರಿಜಿಜು ರಾಜ್ಯವರ್ಧನ್ ಸಿಂಗ್ ರಾಥೋರೆ, ಮನೋಜ್ ತಿವಾರಿ, ಬಬುಲ್ ಸುಪ್ರಿಯೋ, ಸರ್ಬಾನಂದ ಸೋನೋವಾಲ್, ದೇವೇಂದ್ರ ಫಡ್ನಾವಿಸ್, ಜೈರಾಮ್ ಠಾಕೂರ್, ಶಿವರಾಜ್ ಸಿಂಗ್ ಚೌಹಾಣ್ ಸೇರಿದಂತೆ ನೇಕರಿಗೆ ಟ್ಯಾಗ್ ಮಾಡಿದ್ದಾರೆ.
ಈ ಟ್ವೀಟ್ ಗೆ ಪ್ರಧಾನಿ ನರೇಂದ್ರ ಮೋದಿ ಅವರು ರೀ ಟ್ವೀಟ್ ಮಾಡಿ ಗುಡ್ ಲುಕಿಂಗ್ ಎಂದು ಹೇಳಿದ್ದಾರೆ.
ಅಲ್ಲದೇ ಅನೇಕ ಬಿಜೆಪಿ ಅನೇಕ ಮುಖಂಡರು ಜಾಕೆಟ್ ಧರಿಸಿ ತಮ್ಮ ಫೊಟೊಗಳನ್ನು ಟ್ವೀಟ್ ಮಾಡಿದ್ದಾರೆ. ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಸಚಿವ ಥಾವರ್ ಚಂದ್ ಗೆಹ್ಲೋಟ್ ಅವರೂ ಕೂಡ ನಮೋ ಜಾಕೆಟ್ ಧರಿಸಿ ತಮ್ಮ ಫೊಟೊ ಟ್ವಿಟ್ ಮಾಡಿದ್ದಾರೆ.
