ಮಂಗಳೂರು ಬಿಜೆಪಿ ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಕಾಂಗ್ರೆಸ್ ಶಾಸಕ ಮೊಯ್ದಿನ್ ಬಾವಾ ಪರಸ್ಪರ ಬಾಕ್ಸಿಂಗ್ ಪಂಚ್ ಮಾಡೋ ಮೂಲಕ ಗಮನ ಸೆಳೆದರು.
ಮಂಗಳೂರು(ಡಿ.02): ಬೇರೆ ಬೇರೆ ಪಕ್ಷಗಳ ರಾಜಕಾರಣಿಗಳು ರಾಜಕೀಯ ಅಖಾಡದಲ್ಲಿ ಪರಸ್ಪರ ಫೈಟಿಂಗ್ ಮಾಡೋದು ಸಾಮಾನ್ಯ. ಆದ್ರೆ ಬಾಕ್ಸಿಂಗ್ ಅಖಾಡದಲ್ಲಿ ಇವರು ಫೈಟಿಂಗ್ ಮಾಡಿದರೆ ಹೇಗಿರುತ್ತೆ.
ಹೌದು, ಮಂಗಳೂರು ಬಿಜೆಪಿ ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಕಾಂಗ್ರೆಸ್ ಶಾಸಕ ಮೊಯ್ದಿನ್ ಬಾವಾ ಪರಸ್ಪರ ಬಾಕ್ಸಿಂಗ್ ಪಂಚ್ ಮಾಡೋ ಮೂಲಕ ಗಮನ ಸೆಳೆದರು. ಮಂಗಳೂರಿನ ಫಿಟ್ನೆಸ್ ಸೆಂಟರೊಂದರ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದ ಬಿಜೆಪಿ ಸಂಸದ ನಳಿನ್ ಕುಮಾರ್ ಹಾಗೂ ಕಾಂಗ್ರೆಸ್ ಶಾಸಕ ಮೊಯ್ದುನ್ ಬಾವಾ ಬಾಕ್ಸಿಂಗ್ ಮಾಡೋ ಮೂಲಕ ಉದ್ಘಾಟಿಸಿದರು. ಕಮಲ ಹಾಗೂ ಕೈ ಜನಪ್ರತಿನಿಧಿಗಳಿಬ್ಬರ ಬಾಕ್ಸಿಂಗ್'ನಲ್ಲಿ ಗುದ್ದಾಡಿಕೊಂಡಿದ್ದು ನೆರೆದ ಜನರಿಗೂ ಮಜಾ ಸಿಗುವಂತೆ ಮಾಡಿತು.
