ಒಂದೆಡೆ ಮೋದಿ ಸರ್ಕಾರ ದೇಶದ ಯುವಕರಿಗೆ ಅಗತ್ಯವಿರುವಷ್ಟುಉದ್ಯೋಗ ಸೃಷ್ಟಿಸಲಾಗಿದೆ ಎಂದು ಹೇಳಿಕೊಳ್ಳುತ್ತಿದೆ. ಮತ್ತೊಂದೆಡೆ, ದೇಶದಲ್ಲಿ ಅಗತ್ಯವಿರುವಷ್ಟುಉದ್ಯೋಗ ಸೃಷ್ಟಿಯಾಗಿಲ್ಲ: ಬಿಜೆಪಿ ಸಂಸದ

ನವದೆಹಲಿ: ಒಂದೆಡೆ ಮೋದಿ ಸರ್ಕಾರ ದೇಶದ ಯುವಕರಿಗೆ ಅಗತ್ಯವಿರುವಷ್ಟುಉದ್ಯೋಗ ಸೃಷ್ಟಿಸಲಾಗಿದೆ ಎಂದು ಹೇಳಿಕೊಳ್ಳುತ್ತಿದೆ. ಮತ್ತೊಂದೆಡೆ, ದೇಶದಲ್ಲಿ ಅಗತ್ಯವಿರುವಷ್ಟುಉದ್ಯೋಗ ಸೃಷ್ಟಿಯಾಗಿಲ್ಲ ಎಂದು ಸ್ವಪಕ್ಷ ಸಂಸದರೊಬ್ಬರು ಹೇಳಿ, ಸರ್ಕಾರವನ್ನು ಮುಜುಗರಕ್ಕೀಡು ಮಾಡಿದ್ದಾರೆ.

ಸೋಮವಾರ ಲೋಕಸಭೆ ಕಲಾಪದಲ್ಲಿ ಮಾತನಾಡಿದ ಬಿಜೆಪಿ ಸಂಸದ ಹರಿನಾರಾಯಣ್‌ ರಾಜಭರ್‌, ‘ವಾಸ್ತವವಾಗಿ ಯಾವುದೇ ನೂತನ ಉದ್ಯೋಗಗಳನ್ನು ಸರ್ಕಾರ ಸೃಷ್ಟಿಮಾಡಿಲ್ಲ. ದಯಮಾಡಿ ದಾಖಲೆ ನೀಡಿ' ಎಂದು ತಿವಿದರು.

ಆದರೆ ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ ಉತ್ತರಿಸದೇ ಮೌನ ತಾಳಿದರು.