ಹಾಸನ, [ನ.07] ರಾಜ್ಯ ಸರ್ಕಾರ ನವೆಂಬರ್ 10ಕ್ಕೆ ಹಮ್ಮಿಕೊಂಡಿರುವ ಟಿಪ್ಪು ಜಯಂತಿಗೆ ರಾಜ್ಯದಲ್ಲಿ ತೀವ್ರ ವಿರೋಧ ವ್ಯಕ್ತವಾಗ್ತಿದೆ. 

ಅದೇ ದಿನ ಟಿಪ್ಪು ಜಯಂತಿ ವಿರೋಧಿ ಹೋರಾಟ ಸಮಿತಿ ಕೊಡಗು ಬಂದ್‍ಗೆ ಕರೆ ನೀಡಿದೆ. ಈ ಮಧ್ಯೆ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಬಿಜೆಪಿ ಶಾಸಕ ಕೆ.ಎಸ್ ಈಶ್ವರಪ್ಪ ಕಿಡಿಕಾರಿದ್ದಾರೆ. 

ಇಂದು ಹಾಸನಾಭೆ ದರ್ಶನ ಪಡೆದು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ, ಸಮ್ಮಿಶ್ರ ಸರ್ಕಾರವು ಟಿಪ್ಪು ಜಯಂತಿಯನ್ನ ಮುಂದುವರೆಸುತ್ತಿದೆ. ಟಿಪ್ಪು ಜಯಂತಿಯನ್ನ ವಿರೋಧಿಸುತ್ತಿದ್ದ ಸಿಎಂ ಕುಮಾರಸ್ವಾಮಿ ಅವರೇ ಮತ್ತೆ ಜಯಂತಿ ಮಾಡಲು ಹೊರಟಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ರು.

 ಟಿಪ್ಪುಗೂ ಸಿದ್ದರಾಮಯ್ಯಗೂ ಅದೇನು ಸಂಬಂಧವೋ ಭಗವಂತನಿಗೆ ಗೊತ್ತು.ಟಿಪ್ಪು ಹಿಡಿದುಕೊಂಡ ಸಿದ್ದರಾಮಯ್ಯ, ಮಲ್ಯ ಹಾಳಾದ್ರು, ಈಗ ಕುಮಾರಸ್ವಾಮಿಯೂ ಹಾಳಾಗುತ್ತಾರೆ ಎಂದು ಬಿಜೆಪಿ ಮುಖಂಡ ಕೆಎಸ್ ಈಶ್ವರಪ್ಪ ಭವಿಷ್ಯ ನುಡಿದಿದ್ದಾರೆ. 

 ಎರಡು ಪಕ್ಷದವರು ಹುಚ್ಚುನಾಯಿತರ ಕಿತ್ತಾಡುತ್ತಿದ್ದವರು ಈಗ ಅಧಿಕಾರಕ್ಕಾಗಿ ಒಂದಾಗಿದ್ದಾರೆ ಎಂದು ಕಾಂಗ್ರೆಸ್ ಜೆಡಿಎಸ್ ನಾಯಕರ ವಿರುದ್ಧ ಈಶ್ವರಪ್ಪ ವಾಗ್ದಾಳಿ ನಡೆಸಿದ್ರು.