Asianet Suvarna News Asianet Suvarna News

ಕಾಂಗ್ರೆಸ್ ಕಾರ್ಯಕರ್ತ ಮೇಲೆ ಹಲ್ಲೆ ಪ್ರಕರಣ: ಬಿಜೆಪಿ ಶಾಸಕ ಕಾಗೆ ಜಾಮೀನು

ಶಾಸಕ ರಾಜು ಕಾಗೆ ಸೇರಿ 8 ಆರೋಪಿಗಳಿಗೆ ಬೆಳಗಾವಿ ಪ್ರಧಾನ ಜಿಲ್ಲಾ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

BJP MLA Gets Bail in Assault Case
  • Facebook
  • Twitter
  • Whatsapp

ಬೆಳಗಾವಿ (ಜ.25): ಕಾಂಗ್ರೆಸ್​ ಕಾರ್ಯಕರ್ತ ವಿವೇಕ್​ ಶೆಟ್ಟಿ ಮೇಲೆ ಹಲ್ಲೆ ಪ್ರಕರಣದಲ್ಲಿ ಜೈಲುಪಾಲಾಗಿದ್ದ  ಕಾಗೆವಾಡ ಶಾಸಕ ರಾಜ ಕಾಗೆ ಪಟಾಲಂಗೆ ಜಾಮೀನು ಸಿಕ್ಕಿದೆ.

ಶಾಸಕ ರಾಜು ಕಾಗೆ ಸೇರಿ 8 ಆರೋಪಿಗಳಿಗೆ ಬೆಳಗಾವಿ ಪ್ರಧಾನ ಜಿಲ್ಲಾ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ಜಾಮೀನು ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಲಯ, ರಾಜು ಕಾಗೆ ಸಹೋದರ, ಪತ್ನಿ ಶೋಭಾ ಕಾಗೆ, ರಾಜು ಕಾಗೆ ಪುತ್ರಿ ತೃಪ್ತಿ ಕಾಗೆ, ಸಂಬಂಧಿಕ ಪ್ರಸಾದ್​ ಸೇರಿದಂತೆ 8 ಮಂದಿಗಳಿಗೆ ಜಾಮೀನು ನೀಡಿತ್ತು.

ಜನವರಿ 1 ರಂದು  ಶಾಸಕ ರಾಜುಕಾಗೆ ಪಟಾಲಂ, ಕಾಂಗ್ರೆಸ್ ಕಾರ್ಯಕರ್ತ ವಿವೇಕ್ ಶೆಟ್ಟಿ ಮನೆಗೆ ನುಗ್ಗಿ ಆತನಿಗೆ ಮನಬಂದಂತೆ ಹಲ್ಲೆ ನಡೆಸಿತ್ತು.

ಪ್ರಕರಣ ಸಂಬಂಧ ದೂರು ದಾಖಲಸಿಕೊಂಡ ಪೊಲೀಸರು, ಇತ್ತೀಚೆಗಷ್ಟೆ ಆರೋಪಿಗಳನ್ನು ಬಂಧಿಸಿ, ಹಿಂಡಲಗಾ ಜೈಲಿಗಟ್ಟಿದ್ದರು.

Follow Us:
Download App:
  • android
  • ios