ಸಿಎಂ ಕುಮಾರಸ್ವಾಮಿ ಅವರ ಶೂಟೌಟ್ ಹೇಳಿಕೆ ಮತ್ತೆ ಸದ್ದು ಮಾಡಿದೆ. ಉದ್ವೇಗದಲ್ಲಿ ಆ ರೀತಿ ಮಾತನಾಡಿದೆ ಎಂದು ಕುಮಾರಸ್ವಾಮಿ ಅದಕ್ಕೆ ಸ್ಪಷ್ಟನೆಯನ್ನು ನೀಡಿದ್ದಾರೆ. ಆದರೆ ಇದೆ ಹೇಳಿಕೆ ಬಗ್ಗೆ ಬಿಜೆಪಿ ಶಾಸಕ ಶ್ರೀರಾಮುಲು ಪ್ರತಿಕ್ರಿಯೆ ನೀಡಿದ್ದಾರೆ.

ಚಿತ್ರದುರ್ಗ[ಡಿ.25] ಸಿಎಂ ಕುಮಾರಸ್ವಾಮಿ ಅವರ ಶೂಟೌಟ್ ಹೇಳಿಕೆ ಬಗ್ಗೆ ಶಾಸಕ ಶ್ರೀರಾಮುಲು ಪ್ರತಿಕ್ರಿಯೆ ನೀಡಿದ್ದಾರೆ. ಚಿತ್ರದುರ್ಗದಲ್ಲಿ ಮಾತನಾಡಿರುವ ಬಿ.ಶ್ರೀರಾಮುಲು ‘ರಾಜ್ಯದ ಮುಖ್ಯಮಂತ್ರಿ ಆದವರು ಜವಾಬ್ದಾರಿ ಮರೆತು ಹೇಳಿಕೆ ನೀಡಿದ್ದಾರೆ. ಅವರ ಪಕ್ಷದ ಕಾರ್ಯಕರ್ತನ ಕೊಲೆಯಾಗಿದೆ ಅನ್ನೋ ಕಾರಣಕ್ಕೆ ಉದ್ವೇಗದಿಂದ ಶೂಟ್ ಔಟ್ ಮಾಡಿ ಎಂದಿದ್ದಾರೆ. ಆದರೆ ರಾಜ್ಯದಲ್ಲಿ ನೂರಾರು ಹಿಂದು ಯುವಕರ ಹತ್ಯಯಾದಾಗ ಈ ಶಬ್ದ ಬಳಸಿಲ್ಲ. ಕಾನೂನು ಸುವ್ಯವಸ್ಥೆ ಕಾಪಾಡಬೇಕಾದವರು ಈ ರೀತಿ ಮಾತನಾಡಬಾರದು ಎಂದಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

JDS ಕಾರ್ಯಕರ್ತ ಹತ್ಯೆ: ಅಂತಿಮ ದರ್ಶನ ವೇಳೆ ಕುಮಾರಸ್ವಾಮಿ ಕಣ್ಣೀರು

ಸಮ್ಮಿಶ್ರ ಸರ್ಕಾರ ಪತನಕ್ಕೆ ಸಂಬಂಧಿಸಿದಂತೆ ನಾನು ಮಾತನಾಡುವುದಿಲ್ಲ. ಈ ಸಂಬಂಧ ಮಾಧ್ಯಮಗಳಿಗೆ ಹೇಳಿಕೆ ನೀಡದಂತೆ ನಮ್ಮ ನಾಯಕ ಬಿಎಸ್ ವೈ ಆದೇಶ ನೀಡಿದ್ದು ಅದನ್ನು ಪಾಲಿಸುತ್ತೇನೆ ಎಂದು ಚಿತ್ರದುರ್ಗ ವಾಲ್ಮೀಕಿ ಸಮುದಾಯದ ಸರ್ಕಾರಿ ನೌಕರರು ಆಯೋಜಿಸಿರುವ ಕಾರ್ಯಕ್ರಮದಲ್ಲಿ ಶ್ರೀರಾಮುಲು ಹೇಳಿದ್ದಾರೆ.