ಪಂಚ ರಾಜ್ಯಗಳ ಚುನಾವಣೆ ಸುದ್ದಿಯಲ್ಲಿ ಇರುವಾಗಲೆ ಮಹಾರಾಷ್ಟ್ರದ ಬಿಜೆಪಿಗೆ ಆಘಾತವಾಗಿದೆ. ಶಾಸಕ ಅನಿಲ್ ಗೋಟೆ ರಾಜೀನಾಮೆ ನೀಡಿದ್ದಾರೆ.

ಮುಂಬೈ(ನ.13) ಬಿಜೆಪಿಗೆ ಮಹಾರಾಷ್ಟ್ರದ ಶಾಸಕ ಆಘಾತ ನೀಡಿದ್ದು ಪಕ್ಷ ತೊರೆದಿದ್ದಾರೆ. ಮಹಾರಾಷ್ಟ್ರದ ಧುಲೆ ಕ್ಷೇತ್ರ ಪ್ರತಿನಿಧಿಸುವ ಅನಿಲ್ ಮುಂದಿನ ವಾರ ರಾಜೀನಾಮೆ ಸಲ್ಲಿಕೆ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ. ಕಳೆದ ತಿಂಗಳು ಒಬ್ಬ ಬಿಜೆಪಿ ಎಂಎಲ್ ಎ ಪಕ್ಷ ತೊರೆದಿದ್ದರು.

Add Asianetnews Kannada as a Preferred SourcegooglePreferred

ನಾನು ನವೆಂಬರ್ 19ಕ್ಕೆ ರಾಜೀನಾಮೆಯನ್ನು ಸ್ಪೀಕರ್ ಗೆ ಸಲ್ಲಿಕೆ ಮಾಡಲಿದ್ದೇನೆ. ಚಳಿಗಾಲದ ಅಧಿವೇಶನ ಆರಂಭವಾಗಲಿದ್ದು ಅಂದೇ ಸಲ್ಲಿಕೆ ಮಾಡಲಿದ್ದೇನೆ ಎಂದು ತಿಳಿಸಿದ್ದಾರೆ.

ನಾವು ಕೆಲ ಜನರು ವಿರೋಧ ಮಾಡುತ್ತಿದ್ದರೂ ಪಕ್ಷದ ಹಿರಿಯ ನಾಯಕರು ನಮ್ಮ ಮಾತಿಗೆ ಬೆಲೆ ನೀಡುತ್ತಿಲ್ಲ. ಕ್ರಿಮಿನಲ್ ಹಿನ್ನೆಲೆ ಇರುವವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದ್ದಾರೆ.2009ರಲ್ಲಿ ಸ್ವತಂತ್ರವಾಗಿ ಗೆದ್ದಿದ್ದ ಅನಿಲ್ ನಂತರ ಬಿಜೆಪಿ ಸೇರ್ಪಡೆಯಾಗಿದ್ದರು. ಛಾಪಾ ಕಾಗದ ಹಗರಣ ರೂವಾರಿ ಅಬ್ದುಲ್ ಕರೀಂ ತೆಲಗಿ ಪ್ರಕರಣದಲ್ಲಿ ಅನಿಲ್ ಸಹ ಬಂಧನಕ್ಕೆ ಗುರಿಯಾಗಿದ್ದರು.