‘‘ಅವರಿಗೆ ಇರಲು ಕಷ್ಟವಾಗಿದ್ದರೆ, ರಾಜಿನಾಮೆ ಸಲ್ಲಿಸಿ ನಮ್ಮ ವಿರುದ್ಧ ಹೇಳಿಕೆ ನೀಡಲಿ,’’ ಎಂದು ಧಾವಲಿಕರ್‌ಗೆ ಪರ್ಸೇಕರ್ ಸವಾಲು ಹಾಕಿದ್ದಾರೆ.
ಪಣಜಿ(ಡಿ.12): ಗೋವಾದಲ್ಲಿ ಆಡಳಿತರೂಢ ಮೈತ್ರಿ ಪಕ್ಷಗಳಾಗಿರುವ ಬಿಜೆಪಿ ಮತ್ತು ‘ಮಹಾರಾಷ್ಟ್ರವಾಡ ಗೋಮಂಟಕ್ ಪಕ್ಷ(ಎಂಜಿಪಿ)’ದ ನಡುವಿನ ಬಿಕ್ಕಟ್ಟು ತೀವ್ರ ಸ್ವರೂಪ ಪಡೆದಿದೆ.
ಮೈತ್ರಿ ಬಗ್ಗೆ ಅಸಮಾಧಾನ ಇರುವವರು ಹೊರ ನಡೆಯಲು ಸರ್ವ ಸ್ವತಂತ್ರರು ಎಂಬ ಸಿಎಂ ಲಕ್ಷ್ಮಿಕಾಂತ್ ಪರ್ಸೇಕರ್ ಅವರ ಹೇಳಿಕೆ ಹಿನ್ನೆಲೆಯಲ್ಲಿ ವಿಧಾನಸಭೆಯನ್ನು ವಿಸರ್ಜಿಸುವಂತೆ ಎಂಜಿಪಿ ಆಗ್ರಹಿಸಿದೆ. ಕಳೆದೆರಡು ವರ್ಷಗಳ ಪರ್ಸೇಕರ್ ಆಡಳಿತದಲ್ಲಿ ರಾಜ್ಯದ ಅಭಿವೃದ್ಧಿ 10 ವರ್ಷಗಳ ಹಿಂದೆ ಹೋಗಿದೆ ಎಂದು ಎಂಜಿಪಿ ನಾಯಕ ಮತ್ತು ಸಾರಿಗೆ ಸಚಿವ ಸುದಿನ್ ಧಾವಲಿಕರ್ ಆರೋಪಿಸಿದ್ದರು.
‘‘ಅವರಿಗೆ ಇರಲು ಕಷ್ಟವಾಗಿದ್ದರೆ, ರಾಜಿನಾಮೆ ಸಲ್ಲಿಸಿ ನಮ್ಮ ವಿರುದ್ಧ ಹೇಳಿಕೆ ನೀಡಲಿ,’’ ಎಂದು ಧಾವಲಿಕರ್ಗೆ ಪರ್ಸೇಕರ್ ಸವಾಲು ಹಾಕಿದ್ದಾರೆ.
