ಮುಂಬರುವ ಚುನಾವಣೆಗೆ ಭರದ ಸಿದ್ಧತೆ ನಡೆಸಿರುವ ಬಿಜೆಪಿ ಚುನಾವಣಾ ಪ್ರಣಾಳಿಕೆ ಸಮಿತಿಯನ್ನು ರಚಿಸಿದೆ. ಈ ಸಮಿತಿಯಲ್ಲಿ ಒಟ್ಟು 17 ಮಂದಿ ಸದಸ್ಯರಿದ್ದು, ಈಗಿನಿಂದಲೇ ಪ್ರಣಾಳಿಕೆಯಲ್ಲಿ ಸೇರಿಸಬೇಕಾದ ಅಂಶಗಳ ಬಗ್ಗೆ ಸಮಾಲೋಚನೆ, ಪರಾಮರ್ಶೆ ಮತ್ತಿತರ ಪೂರ್ವ ಸಿದ್ಧತೆಯನ್ನು ಆರಂಭಿಸಲಿದ್ದಾರೆ.

ಬೆಂಗಳೂರು: ಮುಂಬರುವ ಚುನಾವಣೆಗೆ ಭರದ ಸಿದ್ಧತೆ ನಡೆಸಿರುವ ಬಿಜೆಪಿ ಚುನಾವಣಾ ಪ್ರಣಾಳಿಕೆ ಸಮಿತಿಯನ್ನು ರಚಿಸಿದೆ. ಈ ಸಮಿತಿಯಲ್ಲಿ ಒಟ್ಟು 17 ಮಂದಿ ಸದಸ್ಯರಿದ್ದು, ಈಗಿನಿಂದಲೇ ಪ್ರಣಾಳಿಕೆಯಲ್ಲಿ ಸೇರಿಸಬೇಕಾದ ಅಂಶಗಳ ಬಗ್ಗೆ ಸಮಾಲೋಚನೆ, ಪರಾಮರ್ಶೆ ಮತ್ತಿತರ ಪೂರ್ವ ಸಿದ್ಧತೆಯನ್ನು ಆರಂಭಿಸಲಿದ್ದಾರೆ.

ಈ ಸಮಿತಿಯಲ್ಲಿ ಇಬ್ಬರು ಮಾಜಿ ಐಎಎಸ್ ಅಧಿಕಾರಿಗಳಿಗೂ ಅವಕಾಶ ಕಲ್ಪಿಸಲಾಗಿದೆ. ಮದನಗೋಪಾಲ್ ಮತ್ತು ಸಿ.ಸೋಮಶೇಖರ್. ಈ ಪೈಕಿ ಸೋಮಶೇಖರ್ ಅವರು ಪಕ್ಷ ಸೇರ್ಪಡೆಯಾಗಿದ್ದಾರೆ. ಮದನಗೋಪಾಲ್ ಅವರು ಹಿತೈಷಿಯಾಗಿದ್ದಾರೆ.

ಪಕ್ಷದ ವಕ್ತಾರ ಎಸ್.ಸುರೇಶ್ ಕುಮಾರ್, ಶಾಸಕರಾದ ಬಸವರಾಜ ಬೊಮ್ಮಾಯಿ, ಲಕ್ಷ್ಮಣ ಸವದಿ, ಡಾ.ಸಿ.ಎನ್.ಅಶ್ವತ್ಥನಾರಾಯಣ, ರಾಮಚಂದ್ರಗೌಡ, ಕೆ.ಬಿ.ಶಾಣಪ್ಪ, ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್, ಸಂಸದ ಶಿವಕುಮಾರ್ ಉದಾಸಿ, ಮಾಜಿ ಸಂಸದ ಜಿ.ಎಸ್.ಬಸವರಾಜು, ಸಹ ವಕ್ತಾರ ಡಾ.ವಾಮನಾಚಾರ್ಯ, ರಾಜ್ಯಸಭಾ ಸದಸ್ಯ ಪ್ರಭಾಕರ್ ಕೋರೆ, ಮಾಜಿ ಸಂಸದ ಜಯಪ್ರಕಾಶ್

ಹೆಗಡೆ, ಮುಖಂಡರಾದ ಗಣೇಶ್ ಯಾಜಿ, ಮದನಗೋಪಾಲ್, ಸಿ.ಸೋಮಶೇಖರ್, ಜಿ.ಎಸ್. ಹೆಗಡೆ ಮತ್ತು ರವೀಂದ್ರ ಪೈ ಸಮಿತಿಯಲ್ಲಿದ್ದಾರೆ.