ಬಿಜೆಪಿ ಸೋಲುತ್ತೆ ಅಂತ ಮೋದಿಗೇ ಹೇಳಿದ್ದೇನೆ: ಸಿಎಂ ಸಿದ್ದರಾಮಯ್ಯ

First Published 24, Feb 2018, 7:37 AM IST
BJP Loss Karnataka Election Says CM Siddaramaiah
Highlights

ರಾಜ್ಯ​ದಲ್ಲಿ ಮತ್ತೆ ಕಾಂಗ್ರೆಸ್‌ ಪಕ್ಷ ಅಧಿ​ಕಾ​ರಕ್ಕೆ ಬರು​ತ್ತದೆ. ಇದನ್ನು ಇಲ್ಲಿ ಮಾತ್ರ ಹೇಳು​ತ್ತಿಲ್ಲ. ನಿಮ್ಮ ಮೋದಿಗೆ ಮುಖಾ​ಮುಖಿ ಹೇಳಿ​ದ್ದೇನೆ. ಬೇಕಿ​ದ್ದರೆ ಸಾಕ್ಷಿಗೆ ಅನಂತ​ಕು​ಮಾರ್‌ ಕೂಡ ಇದ್ದಾ​ರೆ.’ ಮುಂದಿನ ಬಾರಿ ಬಿಜೆಪಿ ಅಧಿ​ಕಾ​ರಕ್ಕೆ ಬರು​ತ್ತದೆ ಎಂದು ಸದ​ನ​ದಲ್ಲಿ ಹೇಳಿದ ಬಿಜೆಪಿ ನಾಯ​ಕ​ರಿಗೆ ಮುಖ್ಯ​ಮಂತ್ರಿ ಸಿದ್ದ​ರಾ​ಮಯ್ಯ ತಿರು​ಗೇಟು ನೀಡಿದ ಪರಿ​ಯಿ​ದು.

ವಿಧಾ​ನ​ಸ​ಭೆ : ‘ರಾಜ್ಯ​ದಲ್ಲಿ ಮತ್ತೆ ಕಾಂಗ್ರೆಸ್‌ ಪಕ್ಷ ಅಧಿ​ಕಾ​ರಕ್ಕೆ ಬರು​ತ್ತದೆ. ಇದನ್ನು ಇಲ್ಲಿ ಮಾತ್ರ ಹೇಳು​ತ್ತಿಲ್ಲ. ನಿಮ್ಮ ಮೋದಿಗೆ ಮುಖಾ​ಮುಖಿ ಹೇಳಿ​ದ್ದೇನೆ. ಬೇಕಿ​ದ್ದರೆ ಸಾಕ್ಷಿಗೆ ಅನಂತ​ಕು​ಮಾರ್‌ ಕೂಡ ಇದ್ದಾ​ರೆ.’ ಮುಂದಿನ ಬಾರಿ ಬಿಜೆಪಿ ಅಧಿ​ಕಾ​ರಕ್ಕೆ ಬರು​ತ್ತದೆ ಎಂದು ಸದ​ನ​ದಲ್ಲಿ ಹೇಳಿದ ಬಿಜೆಪಿ ನಾಯ​ಕ​ರಿಗೆ ಮುಖ್ಯ​ಮಂತ್ರಿ ಸಿದ್ದ​ರಾ​ಮಯ್ಯ ತಿರು​ಗೇಟು ನೀಡಿದ ಪರಿ​ಯಿ​ದು.

ಬಜೆಟ್‌ ಮೇಲಿನ ಚರ್ಚೆಗೆ ಉತ್ತರ ನೀಡುವ ವೇಳೆ ತಮ್ಮ ಮಾತಿಗೆ ಆಕ್ಷೇ​ಪಿಸಿ ವ್ಯಾಪಕ ಭ್ರಷ್ಟಾ​ಚಾರ ಎಸಗಿ​ರುವ ರಾಜ್ಯ ಸರ್ಕಾರ ಮತ್ತೆ ಅಧಿ​ಕಾ​ರಕ್ಕೆ ಬರು​ವು​ದಿಲ್ಲ. ಬಿಜೆ​ಪಿಯೇ ಅಧಿ​ಕಾ​ರಕ್ಕೆ ಬರು​ತ್ತದೆ. ಆಗ ನಾವು ಹೊಸ ಬಜೆಟ್‌ ಮಂಡಿ​ಸು​ತ್ತೇವೆ ಎಂದು ಪ್ರತಿ​ಪಕ್ಷ ನಾಯಕ ಜಗ​ದೀಶ್‌ ಶೆಟ್ಟರ್‌ ಹೇಳಿದಾಗ ಮಾರು​ತ್ತರ ನೀಡಿದ ಸಿದ್ದರಾಮಯ್ಯ, ಬಿಜೆಪಿ ಯಾವ ಕಾರ​ಣಕ್ಕೂ ಅಧಿ​ಕಾ​ರಕ್ಕೆ ಬರು​ವು​ದಿಲ್ಲ ಎಂದ​ರು.

ಈ ಮಾತನ್ನು ನಾನು ನಿಮ್ಮ ಮುಂದೆ ಅಷ್ಟೇ ಅಲ್ಲ, ಖುದ್ದು ಪ್ರಧಾನಿ ನರೇಂದ್ರ ಮೋದಿ ಅವರಿಗೇ ಹೇಳಿ​ದ್ದೇನೆ. ಮೈಸೂ​ರಿನ ಕಾರ್ಯ​ಕ್ರ​ಮ​ದಲ್ಲಿ ಭೇಟಿ​ಯಾ​ಗಿದ್ದ ಅವ​ರಿಗೆ, ನಿಮ್ಮ ಪಕ್ಷದ ರಾಜ್ಯ ನಾಯ​ಕರು ನಿಮಗೆ ಸುಳ್ಳು ಹೇಳು​ತ್ತಿ​ದ್ದಾರೆ. ಕರ್ನಾ​ಟ​ಕ​ದಲ್ಲಿ ಅಧಿ​ಕಾ​ರಕ್ಕೆ ಬರು​ತ್ತೇವೆ ಎಂದು ಭ್ರಮೆ ಮೂಡಿ​ಸಲು ಯತ್ನಿ​ಸು​ತ್ತಿ​ದ್ದಾರೆ. ಅದನ್ನು ನಂಬ​ಬೇಡಿ. ಏಕೆಂದರೆ, ರಾಜ್ಯ​ದಲ್ಲಿ ಮತ್ತೆ ಕಾಂಗ್ರೆಸ್‌ ಅಧಿ​ಕಾ​ರಕ್ಕೆ ಬರು​ತ್ತದೆ ಎಂದು ಹೇಳಿದ್ದೆ ಎಂದ​ರು.

ಇದಕ್ಕೆ ಬಿಜೆಪಿ ಸದ​ಸ್ಯರು ಹೋ.. ಎಂದಾ​ಗ ಮೋದಿ ಮೈಸೂರಿನ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ಅನಂತಕುಮಾರ್‌ ಬಳಿ ನಿಮ್ಮ ಕಾರ್ಯಕ್ರಮದಲ್ಲಿ ನನಗೆ ಭಾಷಣ ಮಾಡಲು ಅವಕಾಶ ಮಾಡಿಕೊಡಿ, ಕೆಲವೊಂದು ವಿಷಯ ಹೇಳುವುದಿದೆ ಎಂದಿದ್ದೆ. ಅನಂತ​ಕು​ಮಾರ್‌ ಈ ಮಾತನ್ನು ಮೋದಿ ಅವ​ರಿಗೇ ಹೇಳಲು ಮುಂದಾ​ದರು. ಆಗ ನಾನೇ ಖುದ್ದಾಗಿ ಹೋಗಿ ಇವರ ಮಾತುಗಳನ್ನೆಲ್ಲಾ ನಂಬಬೇಡಿ. ಮುಂದಿನ ಬಾರಿಯೂ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ಸ್ಪಷ್ಟವಾಗಿ ಹೇಳಿದ್ದೇನೆ. ಇದಕ್ಕೆ ಅನಂತಕುಮಾರ್‌ ಸಾಕ್ಷಿ ಎಂದು ಹೇಳಿದರು.

ಅಷ್ಟಕ್ಕೇ ಸುಮ್ಮ​ನಾ​ಗದೆ, ಮೋದಿಗೆ ಏನೂ ಗೊತ್ತಿಲ್ಲ ಪಾಪ. ರಾಜ್ಯ ಬಿಜೆಪಿಯವರು ಹೇಳಿಕೊಟ್ಟಂತೆ ಹೇಳುತ್ತಿದ್ದಾರೆ. ನಿಮ್ಮ ಬುದ್ಧಿ ಅವರಿಗೆ ಗೊತ್ತಿಲ್ಲ ಎಂದು ರಾಜ್ಯ ಬಿಜೆಪಿ ಮುಖಂಡ​ರನ್ನು ಛೇಡಿ​ಸಿ​ದ​ರು.

loader