ಬೆಂಗಳೂರು, [ಆ.24]: ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಟ್ರಬಲ್ ಶೂಟರ್ ಎಂದೇ ಗುರುತಿಸಿಕೊಂಡಿದ್ದ ಹಿರಿಯ ರಾಜಕಾರಣಿ, ಮಾಜಿ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಇಂದು ವಿಧಿವಶರಾಗಿದ್ದರೆ. ಈ ಮೂಲಕ ಬಿಜೆಪಿ  ಒಂದೇ ವರ್ಷದಲ್ಲಿ ಐವರು ಘಟಾನುಘಟಿ ನಾಯಕರನ್ನು ಕಳೆದುಕೊಂಡಿರುವ ಬಿಜೆಪಿಗೆ ತುಂಬಲಾರದ ನಷ್ಟವಾಗಿದೆ.

ವಾಜಪೇಯಿ ಇನ್ನಿಲ್ಲ: ಅಜಾತಶತ್ರುವನ್ನು ಕಳೆದುಕೊಂಡ ಭಾರತ!

ಅಟಲ್ ಬಿಹಾರಿ ವಾಜಪೇಯಿ, ಮನೋಹರ್ ಪರಿಕ್ಕರ್, ಅನಂತ್ ಕುಮಾರ್, ಸುಷ್ಮಾ ಸ್ವರಾಜ್ ಮತ್ತು ಇಂದು ಅರುಣ್ ಜೇಟ್ಲಿರಂತಹ ಘಟಾನುಘಟಿ ನಾಯಕರನ್ನು ಬಿಜೆಪಿ ಕಳೆದುಕೊಂಡಿದೆ. 

ವಿತ್ತ ವಿದ್ಯಾ ಪಾರಂಗತ: ಬಿಜೆಪಿಯ 'ಅರುಣ' ಅಸ್ತಂಗತ!

ಬಿಜೆಪಿಯ ಮೊದಲ ತಲೆಮಾರಿನ ನಾಯಕರ ವಾಜಪೇಯಿ, ರಾಜಕೀಯದಲ್ಲಿ ಅಪಾರ ಅನುಭವ ಮತ್ತು ಜ್ಞಾನದಿಂದ ವಾಜಪೇಯಿಯವರು 10 ಬಾರಿ ಲೋಕಸಭೆಗೆ ಮತ್ತು ಎರಡು ಬಾರಿ ರಾಜ್ಯಸಭೆಗೆ ಆಯ್ಕೆಯಾಗಿದ್ದ ವಾಜಪೇಯಿ ಶ್ರೇಷ್ಠ ಸಂಸದೀಯ ಪಟು ಆಗಿದ್ದವರು. ಇವರು ಬಹು ಅಂಗಾಗದಿಂದ  ಆಗಸ್ಟ್ 16, 2018 ನಿಧನರಾಗಿದ್ದರು.

ಇನ್ನು 2ನೇ ತಲೆಮಾರಿನ 4 ಅತಿರಥ ನಾಯಕರಾದ ಅನಂತ್ ಕುಮಾರ್, ಮನೋಹರ್ ಪರಿಕ್ಕರ್, ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ ಅವರ ನಿಧನದಿಂದಾಗಿ ಬಿಜೆಪಿಗೆ ಹೊಡೆತ ಮೇಲೆ ಹೊಡೆತ ಬಿದ್ದಿದೆ ಎಂದು ಹೇಳಬಹುದು.

ಬಿಜೆಪಿ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ಇನ್ನಿಲ್ಲ

ಮೊದಲ ಬಾರಿಗೆ 2014ರಲ್ಲಿ ಮೋದಿ ಸಂಪುಟದಲ್ಲಿ ಈ ನಾಲ್ವರು ಜತೆಯಾಗಿ ಸಚಿವರಾಗಿ ಪ್ರಮುಖ ಖಾತೆಗಳನ್ನು ನಿಬಾಯಿಸಿದ್ದರು. ಇದೀಗ ಒಬ್ಬರನ್ನೊಬ್ಬರು ಹಿಂಬಾಲಿಸಿದ್ದಾರೆ.

ಅನಂತ್ ಕುಮಾರ್ - 12 ನವೆಂಬರ್ 2018
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಅನಂತಕುಮಾರ್, ನವೆಂಬರ್, 12,  2018ರಲ್ಲಿ ವಿಧಿವಶರಾಗಿದ್ದರು. ಇವರು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ, ಸಂಸದೀಯ ವ್ಯವಹಾರ ಖಾತೆ, ವಿಮಾನಯಾನ ಖಾತೆ ಸಚಿವರಾಗಿ ಕಾರ್ಯನಿರ್ವಹಿಸಿದ್ದವರು. ಅಷ್ಟೇ ಅಲ್ಲದೇ  ವಿವಿಧ ರಾಜ್ಯಗಳಲ್ಲಿ ಬಿಜೆಪಿ ಉಸ್ತುವಾರಿಯಾಗಿ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದವರಲ್ಲಿ ಒಬ್ಬರಾಗಿದ್ದರು.

ಗೋವಾ ಸಿಎಂ ಮನೋಹರ್ ಪರಿಕ್ಕರ್ ಇನ್ನಿಲ್ಲ

ಮನೋಹರ್ ಪರಿಕ್ಕರ್ 17 ಮಾರ್ಚ್ 2019
ಗೋವಾ ಮುಖ್ಯಮಂತ್ರಿಯಾಗಿದ್ದ ಮನೋಹರ್ ಪರಿಕ್ಕರ್ ಅವರು  17 ಮಾರ್ಚ್ 2019 ರಂದು ನಿಧನರಾಗಿದ್ದು, ಇವರನ್ನು ಮೋದಿ 20014ರಲ್ಲಿ ಪ್ರಧಾನಿಯಾಗುತ್ತಲೇ ಕೇಂದ್ರ ಸೇವೆಗೆ ಕರೆಸಿಕೊಂಡಿದ್ದರು. ಮಹತ್ವದ ರಕ್ಷಣಾ ಖಾತೆಯ ಸಚಿವರಾಗಿ ಮನೋಹರ್ ಪರಿಕ್ಕರ್ ಕಾರ್ಯನಿರ್ವಹಿಸಿದ್ದರು. ಅನಾರೋಗ್ಯದ ನಡುವೆಯೂ ಮತ್ತೆ ಗೋವಾ ಸಿಎಂ ಆಗಿ ಬಜೆಟ್ ಮಂಡಿಸಿದ್ದರು.

ಸುಷ್ಮಾ ಸ್ವರಾಜ್- 6 ಆಗಸ್ಟ್ 2019 
ವಿದೇಶಾಂಗ ಸಚಿವರಾಗಿ ಕೆಲಸ ಮಾಡಿದ್ದ ಸುಷ್ಮಾ ಸ್ವರಾಜ್ ಸುಷ್ಮಾ ಸ್ವರಾಜ್ ಅವರು  ಆಗಸ್ಟ್  6, 2019ರಲ್ಲಿ ಹೃದಯಘಾತದಿಂದ ಕೊನೆಯುಸಿರೆಳೆದರು.  ಇವರು ಜನ ಮೆಚ್ಚಿನ ನಾಯಕಿಯಾಗಿದ್ದರು. 

ಅರುಣ್ ಜೇಟ್ಲಿ 26 ಆಗಸ್ಟ್ 2019
ಕೇಂದ್ರ ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ನಿಧನದ ಆಘಾತದಿಂದ ಹೊರಬರುವ ಮುನ್ನವೇ ಶನಿವಾರ ಮತ್ತೊಬ್ಬ ಹಿರಿಯ ರಾಜಕಾರಣಿ, ಬಿಜೆಪಿಯ ಟ್ರಬಲ್ ಶೂಟರ್ ಎಂದೇ ಗುರುತಿಸಿಕೊಂಡಿದ್ದ ಮಾಜಿ ಹಣಕಾಸು ಸಚಿವ ಅರುಣ್ ಜೇಟ್ಲಿ ನಿಧನರಾಗಿದ್ದಾರೆ.

ಅಟಲ್ ಮತ್ತು ಅಡ್ವಾಣಿ ಯುಗದ ರಾಜಕೀಯ ಚತುರರಾಗಿದ್ದ ಈ ನಾಲ್ವರು ಬಿಜೆಪಿ ಸಂಘಟನೆಯಲ್ಲಿ ಪ್ರಮುಖವಾದ ಪಾತ್ರ ನಿರ್ವಹಿಸಿದ್ದರು. ಇದೀಗ ಇವರನ್ನು ಕಳೆದುಕೊಂಡಿರುವ ಬಿಜೆಪಿಗೆ ಅತಿದೊಡ್ಡ ಆಘಾತವಾಗಿದೆ.