ಬೆಂಗಳೂರು [ಆ.12]: ಕರ್ನಾಟಕ ರಾಜ್ಯ ಬಿಜೆಪಿ ಚುನಾವಣಾ ಸಂಘಟನಾ ಉಸ್ತುವಾರಿಯಾಗಿ ವಿಧಾನ ಪರಿಷತ್‌ ಮಾಜಿ ಸದಸ್ಯ ಅಶ್ವತ್ಥ ನಾರಾಯಣ ಅವರನ್ನು ನೇಮಕ ಮಾಡಲಾಗಿದೆ. 

ಚುನಾವಣಾ ಸಂಘಟನಾ ಸಹ ಉಸ್ತುವಾರಿಯಾಗಿ ಯಲ್ಬುರ್ಗಾ ಶಾಸಕ ಹಾಲಪ್ಪ ಆಚಾರ್‌ ಅವರನ್ನು ನೇಮಕಗೊಳಿಸಿ ಕೇಂದ್ರ ಸಂಘಟನಾ ಚುನಾವಣಾ ಉಸ್ತುವಾರಿ ರಾಧಾಮೋಹನ್‌ ಸಿಂಗ್‌ ಆದೇಶ ಹೊರಡಿಸಿದ್ದಾರೆ.

ಸಂಪುಟ ರಚನೆಗೆ ಕಾಲ ಕೂಡಿಬಂತು: ಝಂಡಾ ಹಾರಿಸಿ ಯಡಿಯೂರಪ್ಪ ದೆಹಲಿಗೆ

ರಾಜ್ಯದಲ್ಲಿ ಸಂಪುಟ ವಿಸ್ತರಣೆಯಾಗುವ ಬೆನ್ನಲ್ಲೇ ಅಶ್ವತ್ಥ ನಾರಾಯಣ ಅವರಿಗೆ ಮಹತ್ವದ ಜವಾಬ್ದಾರಿ ಸಿಕ್ಕಂತಾಗಿದೆ.