ಗಾಂಧಿ ಜಯಂತಿ ಅಂಗವಾಗಿ ರಾಜ್ಯ ಬಿಜೆಪಿ ನಾಯಕರು ಸ್ವಚ್ಚತಾ ದಿವಸ್ ಆಚರಿಸುವುದನ್ನು ಮರೆತರಾ ಎನ್ನುವ ಪ್ರಶ್ನೆ ಎದ್ದಿದೆ.
ಬೆಂಗಳೂರು (ಸೆ. 02): ಗಾಂಧಿ ಜಯಂತಿ ಅಂಗವಾಗಿ ರಾಜ್ಯ ಬಿಜೆಪಿ ನಾಯಕರು ಸ್ವಚ್ಚತಾ ದಿವಸ್ ಆಚರಿಸುವುದನ್ನು ಮರೆತರಾ ಎನ್ನುವ ಪ್ರಶ್ನೆ ಎದ್ದಿದೆ.
ಇಬ್ಬರು ಕೇಂದ್ರ ಸಚಿವರನ್ನು ಹೊರತುಪಡಿಸಿದರೆ ಯಾರಿಗೂ ಸ್ವಚ್ಚತಾ ದಿವಸ್ ನೆನಪಿಲ್ಲ. ಬೆಂಗಳೂರಿನಲ್ಲಿದ್ದರೂ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಸ್ವಚ್ಚತಾ ದಿವಸ್ ಆಚರಿಸಿಲ್ಲ.
ಇನ್ನುವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಹುಬ್ಬಳ್ಳಿಯಲ್ಲಿದ್ದಾರೆ. ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ಶಿವಮೊಗ್ಗದಲ್ಲಿದ್ದಾರೆ. ಮೊದಲೆರಡು ವರ್ಷ ಅಕ್ಟೋಬರ್ 2ರಂದು ಪೊರಕೆ ಹಿಡಿದಿದ್ದ ನಾಯಕರು ಇಂದು ಗಾಂಧಿ ಜಯಂತಿ, ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಣೆಯಲ್ಲೂ ನಿರಾಸಕ್ತಿ ತೋರಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ನಡೆದ ಆಚರಣೆ ವೇಳೆ ಕೂಡಾ ನಾಯಕರು ಗೈರು ಹಾಜರಾಗಿದ್ದರು.
