ಇನ್ನು ಮುಂದೆ ಬಿಜೆಪಿ ಮುಖಂಡರು, ಕಾರ್ಯಕರ್ತರು ಚೀನಾದಲ್ಲಿ ಉತ್ಪಾದಿಸಿರುವ ವಸ್ತುಗಳ ಖರೀದಿ ಸ್ಥಗಿತಗೊಳಿಸಲಿದ್ದಾರೆ. ಬದಲಾಗಿ, ಬೇರೆಯವರೂ ಚೀನಾ ವಸ್ತುಗಳನ್ನು ಖರೀದಿಸದಂತೆ ಪ್ರಚಾರ ನಡೆಸಲಿದ್ದಾರೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಿಳಿಸಿದ್ದಾರೆ. ಅಲ್ಲದೇ, ಈ ತಿಂಗಳ 15ರವರೆಗೆ ಪಕ್ಷದ ಕಾರ್ಯಕರ್ತರು ಸಾರ್ವಜನಿಕರಿಗೆ ಕರಪತ್ರಗಳನ್ನು ಹಂಚು ಮೂಲಕ ಚೀನಾ ವಸ್ತುಗಳನ್ನು ಖರೀದಿಸದಂತೆ ತಿಳಿವಳಿಕೆ ನೀಡುವ ಹಾಗೂ ಪ್ರಚಾರ ಮಾಡುವ ಕೆಲಸ ಮಾಡಲಿದ್ದಾರೆ ಎಂದೂ ಹೇಳಿದರು.

ಬೆಂಗಳೂರು: ಚೀನಾ ವಿರುದ್ಧದ ಆಕ್ರೋಶ ಹೆಚ್ಚುತ್ತಿರುವ ಬೆನ್ನಲ್ಲೇ ಚೀನಾದಲ್ಲಿ ಉತ್ಪಾದಿಸಿರುವ ವಸ್ತುಗಳನ್ನು ಖರೀದಿಸದಂತೆ ನಡೆಯುತ್ತಿರುವ ಅಭಿಯಾನಕ್ಕೆ ಬಿಜೆಪಿಯೂ ಸಾಥ್ ನೀಡಲು ತೀರ್ಮಾನಿಸಿದೆ. ಭಾನುವಾರ ನಡೆದ ರಾಜ್ಯ ಬಿಜೆಪಿಯ ಕಾರ್ಯಕಾರಿಣಿ ವೇಳೆಯೂ ಈ ಬಗ್ಗೆ ಚರ್ಚೆ ನಡೆದಿದ್ದು, ಸ್ವದೇಶಿ ಜಾಗರಣ್ ಮಂಚ್ ಹಮ್ಮಿಕೊಂಡಿರುವ 'ಸ್ವದೇಶಿ ಸುರಕ್ಷಾ ಅಭಿಯಾನ'ಕ್ಕೆ ಕೈಜೋಡಿಸಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.

ಈ ಪ್ರಕಾರ ಇನ್ನು ಮುಂದೆ ಬಿಜೆಪಿ ಮುಖಂಡರು, ಕಾರ್ಯಕರ್ತರು ಚೀನಾದಲ್ಲಿ ಉತ್ಪಾದಿಸಿರುವ ವಸ್ತುಗಳ ಖರೀದಿ ಸ್ಥಗಿತಗೊಳಿಸಲಿದ್ದಾರೆ. ಬದಲಾಗಿ, ಬೇರೆಯವರೂ ಚೀನಾ ವಸ್ತುಗಳನ್ನು ಖರೀದಿಸದಂತೆ ಪ್ರಚಾರ ನಡೆಸಲಿದ್ದಾರೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಿಳಿಸಿದ್ದಾರೆ. ಅಲ್ಲದೇ, ಈ ತಿಂಗಳ 15ರವರೆಗೆ ಪಕ್ಷದ ಕಾರ್ಯಕರ್ತರು ಸಾರ್ವಜನಿಕರಿಗೆ ಕರಪತ್ರಗಳನ್ನು ಹಂಚು ಮೂಲಕ ಚೀನಾ ವಸ್ತುಗಳನ್ನು ಖರೀದಿಸದಂತೆ ತಿಳಿವಳಿಕೆ ನೀಡುವ ಹಾಗೂ ಪ್ರಚಾರ ಮಾಡುವ ಕೆಲಸ ಮಾಡಲಿದ್ದಾರೆ ಎಂದೂ ಹೇಳಿದರು.

ಚೀನಾ ಉತ್ಪಾದಿತ ವಸ್ತುಗಳನ್ನು ಖರೀದಿಸದಂತೆ ಸ್ವದೇಶಿ ಜಾಗರಣ್ ಮಂಚ್'ನ "ಸ್ವದೇಶಿ ಸುರಕ್ಷಾ ಅಭಿಯಾನ"ಕ್ಕೆ ಕೈಜೋಡಿಸಲು ಬಿಜೆಪಿ ತೀರ್ಮಾನಿಸಿದೆ.
- ಸಿ.ಟಿ.ರವಿ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ

ಕನ್ನಡಪ್ರಭ ವಾರ್ತೆ
epaperkannadaprabha.com