ಬೆಂಗಳೂರು [ಜು.011] : ರಾಜ್ಯ ರಾಜಕೀಯದಲ್ಲಿ ಡ್ರಾಮಾ ನಡೆಯುತ್ತಿದ್ದು, ಸರ್ಕಾರ ಪತನದ ಅಂಚಿಗೆ ಬಂದು ನಿಂತಿದೆ. ಇಷ್ಟಾದರೂ ತಲೆಕೆಸಿಕೊಳ್ಳದೆ ತಮ್ಮ ಇಲಾಖೆಯಲ್ಲಿ ಪ್ರಮೋಷನ್ ದಂದೆಯಲ್ಲಿ ತೊಡಗಿದ್ದ ಸಚಿವ ಎಚ್.ಡಿ. ರೇವಣ್ಣಗೆ  ಇದೀಗ ಸಂಕಷ್ಟ ಎದುರಾಗಿದೆ.   

ಲೋಕೋಪಯೋಗಿ ಇಲಾಖೆಯ 800 ಇಂಜಿನಿಯರ್ ಗಳನ್ನು ಪ್ರಮೋಷನ್ ಮಾಡಲು ಮುಂದಾದ ರೇವಣ್ಣ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಲಾಗಿದೆ. 

ರಾಜ್ಯ ಸರ್ಕಾರ ಪತನದ ಹೊಸ್ತಿಲಲ್ಲಿ ಇದ್ದರೂ ವರ್ಗಾವಣೆ ದಂಧೆ ನಡೆಸುತ್ತಿದ್ದಾರೆ ಎಂದು ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷ ಲಿಂಗರಾಜು ದೂರು ನೀಡಿದ್ದಾರೆ. 

ಸರ್ಕಾರ ಬೀಳುತ್ತಿದ್ದರೂ ರೇವಣ್ಣರಿಂದ 700 ಮಂದಿಗೆ ಪ್ರಮೋಷನ್

ತಮ್ಮ ಇಲಾಖೆಯಲ್ಲಿ ಪ್ರಮೋಷನ್ ನೀಡಲು ಮುಂದಾಗಿರುವ ರೇವಣ್ಣ ಅವರಿಗೆ ಬ್ರೇಕ್ ಹಾಕುವಂತೆ ದೂರಿನಲ್ಲಿ ರೈತ ಮೋರ್ಚಾ ಮುಖಂಡರು ಮನವಿ ಮಾಡಿದ್ದಾರೆ.

ಪ್ರಮೋಷನ್ ನೀಡಲು ಲಕ್ಷ ಲಕ್ಷ ಹಣ ಪಡೆಯುತ್ತಿದ್ದಾರೆ ಎಂದೂ ಲೋಕೋಪಯೋಗಿ ಸಚಿವ ರೇವಣ್ಣ ವಿರುದ್ಧ ಆರೋಪ ಕೇಳಿ ಬಂದಿದ್ದು, ಇದೀಗ ಪ್ರಮೋಷನ್ ವಿಚಾರವನ್ನು ಗವರ್ನರ್ ಅಂಗಳಕ್ಕೆ ತರಲಾಗಿದೆ.