ಸದ್ಯದಲ್ಲೇ ನನ್ನ ಮನೆ ಮೇಲೂ ಆದಾಯ ತೆರಿಗೆ ಅಧಿಕಾರಿಗಳು ನಡೆಸಲಿದ್ದಾರೆ. - ಹೀಗಂತ ಆತಂಕಭರಿತ ಶಂಕೆಯನ್ನು ವ್ಯಕ್ತಪಡಿಸುತ್ತಾರೆ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್.

ಬೆಂಗಳೂರು(ಆ.03): ಸದ್ಯದಲ್ಲೇ ನನ್ನ ಮನೆ ಮೇಲೂ ಆದಾಯ ತೆರಿಗೆ ಅಧಿಕಾರಿಗಳು ನಡೆಸಲಿದ್ದಾರೆ. - ಹೀಗಂತ ಆತಂಕಭರಿತ ಶಂಕೆಯನ್ನು ವ್ಯಕ್ತಪಡಿಸುತ್ತಾರೆ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್.

‘ನನ್ನ ಮೇಲೆ ದಾಳಿ ನಡೆಯಲಿದೆ ಎಂದು ಬಿಜೆಪಿ ಮೂಲದಿಂದಲೇ ನನಗೆ ಮಾಹಿತಿ ಬಂದಿದೆ. ಆದರೆ, ಈ ಮಾಹಿತಿ ನೀಡಿದವರು ಯಾರೆಂದು ನಾನು ಬಹಿರಂಗಪಡಿಸುವುದಿಲ್ಲ. ನನಗೆ ಬಂದಿರುವ ಮಾಹಿತಿ ಪ್ರಕಾರ ರಾಜ್ಯದ ಕಾಂಗ್ರೆಸ್ ಮುಖಂಡರ ಮೇಲೆ ದಾಳಿ ನಡೆಸುವಂತೆ ಐಟಿ ಇಲಾಖೆಯ ಅಧಿಕಾರಿಗಳ ಮೇಲೆ ತೀವ್ರ ಒತ್ತಡವೇರಲಾಗುತ್ತಿದೆ’ ಎಂದರು.

ಡಿ.ಕೆ. ಶಿವಕುಮಾರ್ ಅವರ ನಿವಾಸ, ಕಚೇರಿ ಮತ್ತಿತರ ಕಡೆಗಳಲ್ಲಿ ನಡೆದ ಐಟಿ ದಾಳಿಯಿಂದ ಕೊಂಚ ಅಧೀರರಾಗಿರುವಂತೆ ಕಂಡು ಬಂದ ಸಚಿವ ಎಂ.ಬಿ. ಪಾಟೀಲ್, ‘ಐಟಿ ದಾಳಿ ಬಗ್ಗೆ ನನಗೆ ಯಾವುದೇ ಆತಂಕ ಇಲ್ಲ. ಐಟಿ ಅಧಿಕಾರಿಗಳು ಮನೆಗೆ ಬಂದರೆ ಅವರಿಗೆ ಹೂ ಗುಚ್ಛ ನೀಡಿ ಸ್ವಾಗತಿಸುತ್ತೇನೆ. ನನ್ನ ಎಲ್ಲ ವ್ಯವಹಾರವೂ ಸರಿಯಾಗಿಯೇ ಇದೆ. ಆದರೆ ರಾಜಕೀಯವಾಗಿ ಬಿಜೆಪಿ ನನ್ನನ್ನು ಟಾರ್ಗೆಟ್ ಮಾಡುತ್ತಿದೆ, ನನ್ನ ವರ್ಚಸ್ಸಿಗೆ ‘ಕ್ಕೆ ತರಲು ಬಿಜೆಪಿ ನಾಯಕರು ಮುಂದಾಗಿದ್ದಾರೆ’ ಎಂದು ಆರೋಪಿಸಿದರು.

ಲಿಂಗಾಯತ ಸಮುದಾಯಕ್ಕೆ ಸೇರಿರುವ ತಾವು ಬಿಜೆಪಿಗೆ ರಾಜಕೀಯವಾಗಿ ಪೆಟ್ಟು ನೀಡುತ್ತಿರುವ ಹಿನ್ನೆಲೆಯಲ್ಲಿ ದಾಳಿ ಮಾಡಿಸಲು ಬಿಜೆಪಿ ನಾಯಕರು ಒತ್ತಡ ಹೇರುತ್ತಿದ್ದಾ ರೆಯೇ ಎಂದು ಪ್ರಶ್ನಿಸಿದಾಗ, ಇದ್ದರೂ ಇರ ಬಹುದು. ಈ ವಿಷಯದಲ್ಲಿ ಯಡಿಯೂರಪ್ಪ ಹೆಸರು ಹೇಳುವುದಿಲ್ಲ. ಬಿಜೆಪಿ ನಾಯಕರು ಈ ಕೆಲಸ ಮಾಡುತ್ತಿದ್ದಾರೆ ಎಂದು ಉತ್ತರಿಸಿದರು. ಮುಂದಿನ ಚುನಾ ವಣೆಯ ಹೊತ್ತಿಗೆ ಕಾಂಗ್ರೆಸ್ ಪಕ್ಷ ಹಾಗೂ ನಾಯಕರನ್ನು ದುರ್ಬಲಗೊಳಿಸಲು ಬಿಜೆಪಿ ತಂತ್ರ ಮಾಡುತ್ತಿದೆ ಎಂದ ಪಾಟೀಲ್ ಐಟಿ ಇಲಾಖೆ ಸ್ವತಂತ್ರವಾಗಿ ಕಾರ್ಯ ನಿರ್ವಹಿಸಬಾರದು ಎಂದು ಹೇಳಿದರು.