ಟಿಪ್ಪು ಜಯಂತಿ ಹಿನ್ನೆಲೆ ಇಂದು ಪರ ವಿರೋಧಗಳು ಎಲ್ಲೆಡೆ ವ್ಯಕ್ತವಾಗುತ್ತಿದೆ. ಒಂದೆಡೆ ಬಿಜೆಪಿ ನಾಯಕರು ಟಿಪ್ಪು ಜಯಂತಿ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದರೆ, ಇಲ್ಲೊಬ್ಬ ಬಿಜೆಪಿ ಶಾಸಕ ಟಿಪ್ಪು ಜಯಂತಿಗೆ ಬೆಂಬಲ ನೀಡಿದ್ದಾರೆ.
ಬೆಂಗಳೂರು: ಟಿಪ್ಪು ಜಯಂತಿ ಹಿನ್ನೆಲೆ ಇಂದು ಪರ ವಿರೋಧಗಳು ಎಲ್ಲೆಡೆ ವ್ಯಕ್ತವಾಗುತ್ತಿದೆ. ಒಂದೆಡೆ ಬಿಜೆಪಿ ನಾಯಕರು ಟಿಪ್ಪು ಜಯಂತಿ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದರೆ, ಇಲ್ಲೊಬ್ಬ ಬಿಜೆಪಿ ಶಾಸಕ ಟಿಪ್ಪು ಜಯಂತಿಗೆ ಬೆಂಬಲ ನೀಡಿದ್ದಾರೆ.

ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ,ಟಿಪ್ಪು ಜಯಂತಿಗೆ ಶುಭ ಕೋರಿದ ಫ್ಲೆಕ್ಸ್’ನಲ್ಲಿ ಮಿಂಚುತ್ತಿದ್ದಾರೆ. ಇನ್ನು ಟಿಪ್ಪು ಜಯಂತಿ ಶುಭ ಕೋರಿದ ಸತೀಶ್ ರೆಡ್ಡಿ ಭಾವಚಿತ್ರ ಒಳಗೊಂಡ ಫ್ಲೆಕ್ಸ್ಗಳು ಬೊಮ್ಮನಹಳ್ಳಿಯ ಮಂಗಮ್ಮನಪಾಳ್ಯ ರಸ್ತೆಗಳಲ್ಲಿ ರಾರಾಜಿಸುತ್ತಿದೆ. ಇನ್ನು ಬಿಜೆಪಿ ದ್ವಿಮುಖ ನೀತಿ ಬಗ್ಗೆ ಸ್ಥಳೀಯರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನನಗೆ ಗೊತ್ತಿಲ್ಲದೇ, ನನ್ನ ಗಮನಕ್ಕೆ ಬಾರದೇ ಯಾರೋ ಫ್ಲೆಕ್ಸ್ ಹಾಕಿದ್ದಾರೆ. ನನ್ನ ಪಕ್ಷ ನಿರ್ಧಾರ ನನ್ನ ನಿರ್ಧಾರ. ಬಿಜೆಪಿ ಟಿಪ್ಪು ಜಯಂತಿ ವಿರೋಧಿಸಿದೆ, ನಾನು ಕೂಡಾ ವಿರೋಧಿಸುತ್ತೇನೆ. ಅದನ್ನು ತೆರವು ಮಾಡಿಸಲು ಪೊಲೀಸರಿಗೆ ಹೇಳಿದ್ದೇನೆ, ಎಂದು ಸ್ಪಷ್ಟನೆ ನೀಡಿದ್ದಾರೆ.
