ಸಿನಿಮಾಗಳ ಚಿತ್ರಗಳ ನಕಲು ಪ್ರತಿಗಳನ್ನು ಆನ್ ಲೈನ್‌ನಲ್ಲಿ ಹರಿಬಿಡುವುದು ಹಾಗೂ ನೋಡುವುದು ಅಪರಾಧವಾಗಿದ್ದು, ಇಂಥ ಎಡವಟ್ಟು ಮಾಡಿ ತಮಿಳುನಾಡಿನ ಬಿಜೆಪಿ ಮುಖಂಡ ಎಚ್. ರಾಜಾ ಪೇಚಿಗೆ ಸಿಲುಕಿದ್ದಾರೆ.

ಚೆನ್ನೈ(ಅ.23): ಸಿನಿಮಾಗಳ ಚಿತ್ರಗಳ ನಕಲು ಪ್ರತಿಗಳನ್ನು ಆನ್ ಲೈನ್‌ನಲ್ಲಿ ಹರಿಬಿಡುವುದು ಹಾಗೂ ನೋಡುವುದು ಅಪರಾಧವಾಗಿದ್ದು, ಇಂಥ ಎಡವಟ್ಟು ಮಾಡಿ ತಮಿಳುನಾಡಿನ ಬಿಜೆಪಿ ಮುಖಂಡ ಎಚ್. ರಾಜಾ ಪೇಚಿಗೆ ಸಿಲುಕಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮೋದಿ ಸರ್ಕಾರದ ಜಿಎಸ್‌ಟಿ ಹಾಗೂ ನೋಟು ರದ್ದತಿ ಕ್ರಮಗಳನ್ನು ಟೀಕಿಸುವ ಡೈಲಾಗ್ ವಿಜಯ್ ಅಭಿನಯದ ‘ಮರ್ಸಲ್’ ತಮಿಳು ಚಿತ್ರದಲ್ಲಿದೆ. ಈ ಡೈಲಾಗ್‌ಗಳನ್ನು ರಾಜಾ ಅವರು ಮಾಧ್ಯಮಗಳ ಮುಂದೆ ವಿರೋಧಿಸಿ, ಕತ್ತರಿ ಪ್ರಯೋಗಕ್ಕೆ ಆಗ್ರಹಿಸಿದ್ದರು.

ಈ ವೇಳೆ, ‘ನಾನು ಚಿತ್ರವನ್ನು ಆನ್ ಲೈನ್‌'ನಲ್ಲಿ ನೋಡಿದೆ’ ಎಂದು ರಾಜಾ ಹೇಳಿದ್ದರು ಎನ್ನಲಾಗಿದೆ. ಇದನ್ನು ಪ್ರಸ್ತಾಪಿಸಿರುವ ತಮಿಳುನಾಡಿನ ಖ್ಯಾತ ನಟ ವಿಶಾಲ್, ‘ನಕಲು ಪ್ರತಿ ನೋಡಿದ ರಾಜಾ ಕ್ಷಮೆಯಾಚಿಸಬೇಕು’ ಎಂದು ಆಗ್ರಹಿಸಿದರು.