ಗೋ ಹತ್ಯೆ ಬಗ್ಗೆ ಬಿಜೆಪಿ ವಕ್ತಾರರೇ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಹಸುವನ್ನು ಬ್ರಾಹ್ಮಣರು ಸೇರಿ ಎಲ್ಲಾ ಜಾತಿಯವರು ತಿನ್ನುತ್ತಿದ್ದರು. ಗೋವು ಮಾತೆಯೇ ಅಲ್ಲ. ಅದು ಪೂಜನೀಯವೂ ಅಲ್ಲ. ವೈಜ್ಞಾನಿಕ ಕಸಾಯಿಖಾನೆಗಳನ್ನು ತೆರೆಯಲು ನಾನೇ ಅನುಮತಿ ಕೊಟ್ಟಿದೆ ಅಂತಾ ಹೇಳಿದ್ದಾರೆ.

ಬೆಂಗಳೂರು(ಜೂ.05): ಗೋ ಹತ್ಯೆ ಬಗ್ಗೆ ಬಿಜೆಪಿ ವಕ್ತಾರರೇ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಹಸುವನ್ನು ಬ್ರಾಹ್ಮಣರು ಸೇರಿ ಎಲ್ಲಾ ಜಾತಿಯವರು ತಿನ್ನುತ್ತಿದ್ದರು. ಗೋವು ಮಾತೆಯೇ ಅಲ್ಲ. ಅದು ಪೂಜನೀಯವೂ ಅಲ್ಲ. ವೈಜ್ಞಾನಿಕ ಕಸಾಯಿಖಾನೆಗಳನ್ನು ತೆರೆಯಲು ನಾನೇ ಅನುಮತಿ ಕೊಟ್ಟಿದೆ ಅಂತಾ ಹೇಳಿದ್ದಾರೆ.

ಸದ್ಯ ದೇಶದೆಲ್ಲೆಡೆ ಗೋಹತ್ಯೆ ಕುರಿತು ವ್ಯಾಪಕ ಚರ್ಚೆ ನಡೆಯುತ್ತಿದೆ. ಟ್ವಿಟ್ಟರ್ ಮತ್ತು ಫೇಸ್ ಬುಕ್ಕಿನಲ್ಲೂ ಪರ-ವಿರೋಧ ಚರ್ಚೆ ನಡೆಯುತ್ತಿದೆ. ಅದ್ರಲ್ಲೂ ಕರ್ನಾಟಕ, ಕೇರಳ ಮತ್ತು ತಮಿಳುನಾಡಿನಲ್ಲಿ ಪರ, ವಿರೋಧ ಪ್ರತಿಭಟನೆಗಳು ಕೂಡ ನಡೆದಿವೆ. ಆದ್ರೆ ಬಿಜೆಪಿ ಅದನ್ನು ಸಮರ್ಥಿಸಿಕೊಳ್ಳುತ್ತಲೇ ಬಂದಿದೆ. ಇದರ ಮಧ್ಯೆ ಅದೇ ಬಿಜೆಪಿ ಪಕ್ಷದ ವಕ್ತಾರರೇ ಗೋ ನಿಷೇಧ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

'ಹಸುವನ್ನು ಆಹಾರವಾಗಿ ಎಲ್ಲ ಜಾತಿಯವರು ತಿನ್ನುತ್ತಿದ್ದರು: ಬ್ರಾಹ್ಮಣರು ಸೇರಿ ಎಲ್ಲರೂ ಗೋಮಾಂಸ ತಿನ್ನುತ್ತಿದ್ದರು'

ಹೀಗಂಥಾ ಹೇಳಿ ವಿವಾದ ಸೃಷ್ಟಿಸಿರುವುದು ಬಿಜೆಪಿ ಪಕ್ಷದ ವಕ್ತಾರ ಡಾ. ವಾಮನಚಾರ್ಯ. ಮೇ 28ರಂದು ಗೋ ಹತ್ಯೆ ಸಂಬಂಧ ಸುವರ್ಣನ್ಯೂಸ್ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಡಾ. ವಾಮನಾಚಾರ್ಯ, ಭಾರತ ಕೃಷಿ ಪ್ರಧಾನ ದೇಶವಾಗುವ ಮುನ್ನ ಹಸುವನ್ನು ಆಹಾರವಾಗಿ ಎಲ್ಲ ಜಾತಿಯವರು ತಿನ್ನುತ್ತಿದ್ರು. ಬ್ರಾಹ್ಮಣರು ಸೇರಿ ಎಲ್ಲರೂ ಗೋಮಾಂಸ ತಿನ್ನುತ್ತಿದ್ದರು ಅಂತಾ ಹೇಳಿದ್ದಾರೆ.

ಇಷ್ಟೆ ಅಲ್ಲ, ನಾನು ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿ ರಾಜ್ಯದ 16 ಕಡೆ ವೈಜ್ಞಾನಿಕ ಕಸಾಯಿಖಾನೆಗಳನ್ನು ತೆರೆಯಲು ಅನುಮತಿ ನೀಡಿದ್ದೆ ಅಂತಾ ಹೇಳಿದ್ದಾರೆ. ಗೋಮಾತೆ ನನಗೆ ಪೂಜನೀಯ ಅಲ್ಲ. ಗೋಮಾತೆ ಅನ್ನೋದನ್ನು ನಾನು ಒಪ್ಪೋದಿಲ್ಲ ಅಂತಾ ಹೇಳಿದ ವಾಮನಾಚಾರ್ಯ ದೇಶದಲ್ಲಿರುವ ಶೇಕಡಾ 90 ರಷ್ಟ ದಲಿತರು ಗೋ ಮಾಂಸ ಸೇವಿಸಲ್ಲ ಅಂತಾ ಹೇಳಿದ್ದಾರೆ. ಇದಕ್ಕೆ ಸ್ಪಷ್ಟೀಕರಣ ಕೂಡ ನೀಡಿದ್ದಾರೆ.

ಜೊತೆಗೆ ಮುದಿ ಹಸುಗಳನ್ನು ಯಾರೂ ತಿನ್ನುವುದಕ್ಕೆ ಬಳಸುವುದಿಲ್ಲ. ಗೋಮಾಂಸ ತಿನ್ನುವವರು ಎಳೆಯ ಹಸುವನ್ನೇ ಕೊಂದು ತಿನ್ನುತ್ತಾರೆ. ನಾನು, ಹಸು ಕತ್ತರಿಸುವುದನ್ನು ಕಣ್ಣಾರೆ ಕಂಡಿದ್ದೇನೆ ಅಂತಾ ಹೇಳಿದ್ದಾರೆ. ಒಟ್ಟಿನಲ್ಲಿ ವಾಮನಾಚಾರ್ಯರ ವಿವಾದಾತ್ಮಕ ಹೇಳಿಕಗೆೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ವಾಮನಚಾರ್ಯಯ ಈ ವಾದವನ್ನು ಬಿಜೆಪಿ ಒಪ್ಪಿಕೊಳ್ಳುತ್ತಾ? ಪ್ರಗತಿಪರರು ಏನು ಹೇಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.