ತುಮಕೂರು(ಆ.25]  ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಹಾಲಿ-ಮಾಜಿ ಎಮ್ ಎಲ್ ಎ ಗಳ  ನಡುವೆ ಟಾಕ್ ಫೈಟ್ ಆರಂಭವಾಗಿದೆ. ಗ್ರಾಮಾಂತರ ಜೆಡಿಎಸ್ ಶಾಸಕ ಸಿ.ಗೌರಿಶಂಕರ ಮೇಲೆ ಭ್ರಷ್ಟಾಚಾರದ ‌ಆರೋಪ ಮಾಡಿರುವ  ಮಾಜಿ ಶಾಸಕ  ಸುರೇಶ್ ಗೌಡ ದೂರಿನ ಸರಮಾಲೆಯನ್ನೇ ಇಟ್ಟಿದ್ದಾರೆ.

ಶಾಸಕ ಗೌರಿಶಂಕರ್ ಅಧಿಕಾರಿಗಳ ವರ್ಗಾವಣೆ ಹಾಗೂ ಕಾಮಗಾರಿಗಳ ಕಮಿಷನ್ ದಂಧೆಯಿಂದ ಕೇವಲ ಮೂರೇ ತಿಂಗಳಲ್ಲಿ 8 ಕೋಟಿ ಪಡೆದಿದ್ದಾರೆ. ಶಾಸಕರ ಆಪ್ತ ನರೇಂದ್ರನಹಳ್ಳಿ ವಿಜಯಕುಮಾರ್ ಡೈರಿಯಲ್ಲಿ ಹಣ ಪಡೆದ ಉಲ್ಲೇಖವಿದೆ.  ಇಲ್ಲೆವರೆಗೂ 8 ಕೋಟಿ ರೂ. ವಸೂಲಿ ಮಾಡಲಾಗಿದೆ ಎಂದು ಎಂಟ್ರಿಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

ಈ ಡೈರಿ ರಹಸ್ಯ ಬಿಚ್ಚಿಡಿಲು ಸಿಬಿಐ ಗೆ ಮನವಿ ಮಾಡುತ್ತೇನೆ. ಪಿಎಸ್ ಐ ವರ್ಗಾವಣೆಗೆ 15 ಲಕ್ಷ ರೂ, ಸಿಪಿಐ ಗೆ 20 ಲಕ್ಷ ರೂ ಫಿಕ್ಸ್ ಆಗಿದೆ. ಗ್ರಾಮ ಪಂಚಾಯತಿ, ಕಂದಾಯ ಇಲಾಖೆ ಸೇರಿದಂತೆ ಎಲ್ಲಾ ಇಲಾಖೆಯಲ್ಲೂ ವರ್ಗಾವಣೆ ಗಾಗಿ ಹಣ ಪಡೆಯುತಿದ್ದಾರೆ. ಕೇವಲ ಮೂರೇ ತಿಂಗಳಲ್ಲಿ ಬೃಹ್ಮಾಂಡ ಭ್ರಷ್ಟಾಚಾರ ಎಸಗಿದ್ದಾರೆ ಎಂದು ಮಾಜಿ ಶಾಸಕ ಸುರೇಶ್ ಗೌಡ ಪತ್ರಿಕಾಗೋಷ್ಠಿಯಲ್ಲಿ ಗಂಭೀರ ಆರೋಪ ಮಾಡಿದ್ದಾರೆ.