ತುಮಕೂರು : ಮೋದಿಯನ್ನು ಹಕ್ಕಿ ಹಿಕ್ಕೆಗೆ ಹೋಲಿಸಿ ಟ್ವೀಟ್ ಮಾಡಿದ್ದ ಕಾಂಗ್ರೆಸ್ ನ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾ ವಿರುದ್ಧ ಮಾಜಿ ಸಚಿವ ಸೊಗಡು ಶಿವಣ್ಣ ಕಿಡಿಕಾರಿದ್ದಾರೆ. 

 "ರಮ್ಯಾ ಹುಟ್ಟೇ ಹೇಗೆಂದು ಗೊತ್ತಿಲ್ಲ. ರಾಷ್ಟ್ರೀಯ ಪಕ್ಷದ ಅಧ್ಯಕ್ಷರೊಂದಿಗೆ "ಓಡಾಡ್ತಾರೆ  ಮೋದಿಯವರು ಪ್ರತಿಮೆ ಪಕ್ಷದಲ್ಲಿ ನಿಂತಾಗ ಪುಟ್ಟದಾಗಿಯೇ ಕಾಣ್ತಾರೆ.  ಪ್ರಧಾನಿಯವರ ಕೀರ್ತಿ ದೊಡ್ಡದು,ಇದನ್ನು ಸಹಿಸದೆ ಲಘುವಾಗಿ ಮಾತನಾಡಿದ್ದಾರೆ ಎಂದು ತುಮಕೂರಿನಲ್ಲಿ ಶಿವಣ್ಣ ಹೇಳಿದ್ದಾರೆ.

ರಮ್ಯಾಗೆ ಲಘುವಾಗಿ ಮಾತನಾಡಿಯೇ ರೂಢಿ.  ರಮ್ಯಾ ರಾಷ್ಟ್ರೀಯ ಪಕ್ಷದ ಜೊತೆಗೆ ಓಡಾಡುತ್ತಾರೆ ಅದರ ಬಗ್ಗೆ ನಾವು ಮಾತನಾಡಲು ಸಾಧ್ಯವೇ ಎಂದು ಪ್ರಶ್ನೆ ಮಾಡಿದ್ದಾರೆ.  

ಅಲ್ಲದೇ ರಮ್ಯಾ ಬಗ್ಗೆ ಮಾತನಾಡಲು ನಾಚಿಕೆಯಾಗುತ್ತೆ ಎಂದಿರುವ ಅವರು ಈಗ ಮೀಟೂ ಚಳುವಳಿ ನಡೆಯುತ್ತಿದೆ ಇಂತಹ ಸಂದರ್ಭದಲ್ಲಿ ಈ ರೀತಿ ಮಾತನಾಡುವುದು ಸರಿಯಲ್ಲ ಎಂದಿದ್ದಾರೆ.