Asianet Suvarna News Asianet Suvarna News

(Video)ಹೆಸರಿಗೆ ಬಿಜೆಪಿ ನಾಯಕ, ಇರೋದು ಕಾಂಗ್ರೆಸ್ಸಿಗರ ಜೊತೆಗೆ!: ನಾಯಕನ ನಡವಳಿಕೆಗೆ ಬಿಜೆಪಿ ಗರಂ..!

ಬಿಜೆಪಿ ನಾಯಕ ಶಂಕರ್ ಬಿದರಿ ವರ್ತನೆಗೆ ಬಿಜೆಪಿ ನಾಯಕರು ಇದೀಗ ಗರಂ ಆಗಿದ್ದಾರೆ. ಕಾಂಗ್ರೆಸ್ ನಾಯಕ ಎಂ. ಬಿ ಪಾಟೀಲ್ ಜೊತೆ ಈ ನಾಯಕ ಕಾಣಿಸಿಕೊಂಡಿದ್ದೇ ಬಿಜೆಪಿಗರ ಕ್ರೊಶಕ್ಕೆ ಕಾರಣವಾಗಿದ್ದು. ಅಷ್ಟಕ್ಕೂ ಶಂಕರ್ ಬಿದರಿ ಕಾಂಗ್ರೆಸ್ ನಾಯನೊಂದಿಗೆ ಕಾಣಿಸಿಕೊಂಡಿದ್ದೇಕೆ? ಇಲ್ಲಿದೆ ವಿವರ

BJP Leader Shankar Bidari with MB Patil

ಬೆಂಗಳೂರು(ಸೆ.15): ಬಿಜೆಪಿ ನಾಯಕ ಶಂಕರ್ ಬಿದರಿ ವರ್ತನೆಗೆ ಬಿಜೆಪಿ ನಾಯಕರು ಇದೀಗ ಗರಂ ಆಗಿದ್ದಾರೆ. ಕಾಂಗ್ರೆಸ್ ನಾಯಕ ಎಂ. ಬಿ ಪಾಟೀಲ್ ಜೊತೆ ಈ ನಾಯಕ ಕಾಣಿಸಿಕೊಂಡಿದ್ದೇ ಬಿಜೆಪಿಗರ ಕ್ರೊಶಕ್ಕೆ ಕಾರಣವಾಗಿದ್ದು. ಅಷ್ಟಕ್ಕೂ ಶಂಕರ್ ಬಿದರಿ ಕಾಂಗ್ರೆಸ್ ನಾಯನೊಂದಿಗೆ ಕಾಣಿಸಿಕೊಂಡಿದ್ದೇಕೆ? ಇಲ್ಲಿದೆ ವಿವರ

ಈಗಾಗಲೇ ಸಿದ್ಧಗಂಗಾ ಮಠ ಹಾಗೂ ಕಾಂಗ್ರೆಸ್ ನಾಯಕ . ಎಂ. ಬಿ. ಪಾಟೀಲ್ ವಿಚಾರ ಭಾರೀ ಸದ್ದು ಮಾಡಿತ್ತು. ಇದೇ ವಿಚಾರವಾಗಿ ಎಂ.ಬಿ.ಪಾಟೀಲ್​​ ನಿನ್ನೆಯಷ್ಟೇ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ್ದರು. ಆದರೆ ಇದೀಗ ಭೇಟಿಯ ಸಂದರ್ಭದಲ್ಲಿ ಅವರೊಂದಿಗೆ ಬಿಜೆಪಿ ನಾಯಕ ಶಂಕರ್ ಬಿದರಿಯೂ ಅವರೊಂದಿಗಿರುವ ವಿಡಿಯೋ ವೈರಲ್ ಆಗಿದೆ.

ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಶಂಕರ್ ಬಿದರಿ ಮೇಲೆ ಗರಂ ಆಗಿರುವ ಬಿಜೆಪಿ ನಾಯಕರು 'ಮಧ್ಯಸ್ಥಿಕೆಗೆ ಶಂಕರ್​ ಬಿದರಿ ಯಾಕೆ ಹೋಗಬೇಕಿತ್ತು?, ಕಾಂಗ್ರೆಸ್ ನಾಯಕರಿಗೆ ಇಲ್ಲದ ಆಸಕ್ತಿ ಶಂಕರ್​ ಬಿದರಿಗೆ ಯಾಕೆ?' ಎಂದು ಕಿಡಿಕಾರಿದ್ದಾರೆ.

 

Follow Us:
Download App:
  • android
  • ios