ಸಂತೋಷ್ ಹತ್ಯೆ ಸಂದರ್ಭದಲ್ಲಿ ಬಿಜೆಪಿ, ಕಾಂಗ್ರೆಸ್ ಟೀಕೆ-ಪ್ರತಿ ಟೀಕೆ ಸಂದರ್ಭದಲ್ಲಿ  ಗೃಹ ಸಚಿವ ರಾಮಲಿಂಗಾರೆಡ್ಡಿ ಸತ್ತವರೆಲ್ಲ ಬಿಜೆಪಿಯವರೇ ಎಂದು ಟೀಕಿಸಿದ್ದರು. 

ಕಲಬುರಗಿ (ಫೆ.17): ಸಂತೋಷ್ ಹತ್ಯೆ ಸಂದರ್ಭದಲ್ಲಿ ಬಿಜೆಪಿ, ಕಾಂಗ್ರೆಸ್ ಟೀಕೆ-ಪ್ರತಿ ಟೀಕೆ ಸಂದರ್ಭದಲ್ಲಿ ಗೃಹ ಸಚಿವ ರಾಮಲಿಂಗಾರೆಡ್ಡಿ ಸತ್ತವರೆಲ್ಲ ಬಿಜೆಪಿಯವರೇ ಎಂದು ಟೀಕಿಸಿದ್ದರು. 

ರಾಮಲಿಂಗಾರೆಡ್ಡಿಯವರ ಈ ಹೇಳಿಕೆಗೆ ಬಿಜೆಪಿ ಸಂಸದ ಪ್ರಹ್ಲಾದ್ ಜೋಷಿ ತಿರುಗೇಟು ಕೊಟ್ಟಿದ್ದಾರೆ. ವಾಟ್ ನಾನ್ಸೆನ್ಸ್ ಯು ಆರ್ ಸ್ಪೀಕಿಂಗ್ ಮಿಸ್ಟರ್ ರಾಮಲಿಂಗಾರೆಡ್ಡಿ? ರಾಮಲಿಂಗರೆಡ್ಡಿಯವರೇ ಗಲ್ಲಿ ನಾಯಕರ ಥರ ಮಾತಾಡಬೇಡಿ. 
ನೀವೊಬ್ಬರು ರಾಜ್ಯದ ಗೃಹ ಸಚಿವರೆನ್ನೊದು ನೆನಪಿರಲಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ನಮ್ಮ ಬಗ್ಗೆ ರಾಹುಲ್ ಗಾಂಧಿ ಕೊಡೊ ಸರ್ಟಿಫಿಕೆಟ್ ನಮಗೆ ಬೇಕಾಗಿಲ್ಲ. ರಾಗಾ ಓರ್ವ ಪಾಟ್೯ ಟೈಮ್ ರಾಜಕಾರಣಿ. ರಾಗಾ ಬಗ್ಗೆ ಸಿರಿಯಸ್ ಆಗಿ ತೆಗೆದುಕೊಳ್ಳುವ ಅವಶ್ಯಕತೆಯಿಲ್ಲ ಎಂದು ಪ್ರಹ್ಲಾದ್ ಜೋಷಿ ಹೇಳಿದ್ದಾರೆ.