Asianet Suvarna News Asianet Suvarna News

ಬಿಜೆಪಿಗೆ ಬಿಗ್ ಶಾಕ್: ಪಕ್ಷ ತೊರೆದ ಹಿರಿಯ ನಾಯಕಿ

ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಬಿಜೆಪಿಗೆ ಟ್ರಬಲ್ ಮೇಲೆ ಟ್ರಬಲ್ ಶುರುವಾಗಿದೆ. ಈ ಬಾರಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಬೇಕೆಂದು ಬಿಜೆಪಿ ಭರ್ಜರಿ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದರೆ, ಮತ್ತೊಂದೆಡೆ ಒಬ್ಬರಿಂದೆ ಒಬ್ಬರು ಪಕ್ಷ ತೊರೆಯುತ್ತಿದ್ದಾರೆ.

BJP leader Padma Shukla quits party in MP, joins Congress
Author
Bengaluru, First Published Sep 24, 2018, 10:12 PM IST
  • Facebook
  • Twitter
  • Whatsapp

ಭೋಪಾಲ್, [ಸೆ.24]: ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಬಿಜೆಪಿಗೆ ಟ್ರಬಲ್ ಮೇಲೆ ಟ್ರಬಲ್ ಶುರುವಾಗಿದೆ.

ಈ ಬಾರಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಬೇಕೆಂದು ಬಿಜೆಪಿ ಭರ್ಜರಿ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದರೆ, ಮತ್ತೊಂದೆಡೆ ಒಬ್ಬರಿಂದೆ ಒಬ್ಬರು ಪಕ್ಷ ತೊರೆಯುತ್ತಿದ್ದಾರೆ.

ಮೊನ್ನೇ ಅಷ್ಟೇ ಬಿಜೆಪಿಯ ಹಿರಿಯ ನಾಯಕ ಜಸ್ವಂತ್ ಸಿಂಗ್ ಅವರ ಪುತ್ರ ಮಾನವೇಂದ್ರ ಸಿಂಗ್ ಪಕ್ಷ ತೊರೆದಿದ್ದರು. ಇದರ ಬೆನ್ನಲ್ಲಿಯೇ ಇಂದು ಮಧ್ಯ ಪ್ರದೇಶ ಸಮಾಜ ಕಲ್ಯಾಣ ಮಂಡಳಿ ಮುಖ್ಯಸ್ಥೆ ಪದ್ಮ ಶುಕ್ಲ ಇಂದು ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಿದ್ದಾರೆ. 

ನಾನು 1980ರಿಂದ ಪಕ್ಷದ ಪ್ರಾಥಮಿಕ ಸದಸ್ಯೆಯಾಗಿ ನನ್ನ ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ನಿಭಾಯಿಸಿದ್ದೇನೆ. ಆದರೆ, 2014ರ ಚುನಾವಣೆ ಬಳಿಕ ವಿಜಯರಾಘವಘರ್ ಕ್ಷೇತ್ರದಲ್ಲಿ ಕಾರ್ಯಕರ್ತರ ಕಡೆಗಣನೆ ಹಾಗೂ ಶೋಷಣೆಯಿಂದಾಗಿ ನನಗೆ ನೋವುಂಟು ಮಾಡಿದೆ. ಈ ಹಿನ್ನೆಲೆಯಲ್ಲಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಹೇಳಿದ್ದಾರೆ. 

2013ರ ವಿಧಾನಸಭಾ ಚುನಾವಣೆಯಲ್ಲಿ ವಿಜಯರಾಘವಘರ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಪದ್ಮ ಶುಕ್ಲ ಕೇವಲ 929 ಮತಗಳಿಂದ ಸೋಲು ಕಂಡಿದ್ದರು. 

Follow Us:
Download App:
  • android
  • ios