ಬಿಜೆಪಿ ಮುಖಂಡ ಮರ್ಡರ್

First Published 23, Jun 2018, 10:01 AM IST
BJP Leader Murder In Chikkamagaluru
Highlights

ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಮಹಮದ್ ಅನ್ವರ್ ಅವರನ್ನು ಇಬ್ಬರು ಅಪರಿಚಿತರು ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ. ಅನ್ವರ್ ಕಾರನ್ನು ಅಡ್ಡಗಟ್ಟಿದ ಅಪರಿಚಿತರು ಏಳೆಂಟು ಕಡೆಗಳಲ್ಲಿ ಚಾಕುವಿನಿಂದ ಇರಿದಿದ್ದಾರೆ. 

ಚಿಕ್ಕಮಗಳೂರು: ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಮಹಮದ್ ಅನ್ವರ್(40) ಅವರನ್ನು ಇಬ್ಬರು ಅಪರಿಚಿತರು ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ. ಅನ್ವರ್ ಕಾರನ್ನು ಅಡ್ಡಗಟ್ಟಿದ ಅಪರಿಚಿತರು ಏಳೆಂಟು ಕಡೆಗಳಲ್ಲಿ ಚಾಕುವಿನಿಂದ ಇರಿದಿದ್ದಾರೆ. 

ನಗರದ ಉಪ್ಪಳ್ಳಿ ಬಡಾವಣೆ ಯಲ್ಲಿ ವಾಸವಾಗಿದ್ದ ಅನ್ವರ್ ಇಲ್ಲಿನ ಗೌರಿ ಕಾಲುವೆ ಬಡಾವಣೆಯ ರಸ್ತೆಯಲ್ಲಿ ಶುಕ್ರವಾರ ರಾತ್ರಿ ಸುಮಾರು 9.30 ವೇಳೆಯಲ್ಲಿ ಕಾರಿನಲ್ಲಿ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಇಬ್ಬರು ಅಪರಿಚಿತರು ಬೈಕ್‌ನಲ್ಲಿ ಹಿಂಬಾಲಿಸಿ ಕಾರನ್ನು ಅಡ್ಡಗಟ್ಟಿ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ. 

ತೀವ್ರವಾಗಿ ಗಾಯಗೊಂಡಿದ್ದ ಅನ್ವರ್ ಅವರನ್ನು ತಕ್ಷಣವೇ ಇಲ್ಲಿನ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿ ಯಾಗದೆ ಮೃತಪಟ್ಟಿದ್ದಾರೆ. ಈ ಘಟನೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. 

loader