ಲಕ್ಷ್ಮಣರೇಖೆ ಹಾಕಿಕೊಳ್ಳಿ: ಪತ್ರಕರ್ತರಿಗೆ ಬಿಜೆಪಿ ನಾಯಕ ಧಮ್ಕಿ

First Published 24, Jun 2018, 10:25 AM IST
BJP leader Lal Singh warns Kashmiri journalists
Highlights

 ಕಾಶ್ಮೀರದಲ್ಲಿ ಇತ್ತೀಚೆಗೆ ಹತ್ಯೆಗೀಡಾಗಿದ್ದ ಹಿರಿಯ ಪತ್ರಕರ್ತ ಶುಜಾತ್‌ ಬುಖಾರಿ ಪ್ರಕರಣವನ್ನು ಮುಂದಿಟ್ಟುಕೊಂಡು ಜಮ್ಮು-ಕಾಶ್ಮೀರ ಬಿಜೆಪಿ ಮುಖಂಡರೊಬ್ಬರು ಪತ್ರಕರ್ತರಿಗೆ ಧಮಕಿ ಹಾಕಿದ್ದಾರೆ. ಇದು ಭಾರಿ ವಿವಾದಕ್ಕೆ ಕಾರಣವಾಗಿದೆ.

ಜಮ್ಮು :  ಕಾಶ್ಮೀರದಲ್ಲಿ ಇತ್ತೀಚೆಗೆ ಹತ್ಯೆಗೀಡಾಗಿದ್ದ ಹಿರಿಯ ಪತ್ರಕರ್ತ ಶುಜಾತ್‌ ಬುಖಾರಿ ಪ್ರಕರಣವನ್ನು ಮುಂದಿಟ್ಟುಕೊಂಡು ಜಮ್ಮು-ಕಾಶ್ಮೀರ ಬಿಜೆಪಿ ಮುಖಂಡರೊಬ್ಬರು ಪತ್ರಕರ್ತರಿಗೆ ಧಮಕಿ ಹಾಕಿದ್ದಾರೆ. ಇದು ಭಾರಿ ವಿವಾದಕ್ಕೆ ಕಾರಣವಾಗಿದೆ.

ರಾಜ್ಯ ಬಿಜೆಪಿ ಮುಖಂಡ ಚೌಧರಿ ಲಾಲ್‌ ಸಿಂಗ್‌ ಅವರೇ ಧಮಕಿ ಹಾಕಿದ ವ್ಯಕ್ತಿ. ನಾನು ಕಾಶ್ಮೀರಿ ಪತ್ರಕರ್ತರಿಗೆ ಒಂದು ಮಾತು ಹೇಳುತ್ತಿದ್ದೇನೆ. ಕೆಲಸ ಮಾಡುವುದಕ್ಕೆ ಸಂಬಂಧಿಸಿದಂತೆ ಹಾಗೂ ಹೇಗೆ ಬದುಕಬೇಕು ಎಂಬುದಕ್ಕೆ ಲಕ್ಷ್ಮಣರೇಖೆ ಹಾಕಿಕೊಳ್ಳಿ. ಶುಜಾತ್‌ ಬುಖಾರಿ ಅವರಿಗೆ ಉಂಟಾದ ಪರಿಸ್ಥಿತಿಯಲ್ಲೇ ಬದುಕಲು ನೀವು ಬಯಸುತ್ತೀರಾ? ಎಂದು ಲಾಲ್‌ ಸಿಂಗ್‌ ಆಡಿರುವ ಮಾತುಗಳ ವಿಡಿಯೋ ಈಗ ವೈರಲ್‌ ಆಗಿದೆ.ಅದಕ್ಕೆಂದೇ ಲಕ್ಷ್ಮಣರೇಖೆ ಹಾಕಿಕೊಳ್ಳಿ. ಇದರಿಂದ ಸೋದರತೆ ಉಳಿಯುತ್ತದೆ ಹಾಗೂ ಪ್ರಗತಿಯೂ ಆಗುತ್ತದೆ ಎಂದು ಸಿಂಗ್‌ ಎಚ್ಚರಿಸಿದ್ದಾರೆ.

ಸಿಂಗ್‌ ಅವರ ಹೇಳಿಕೆಯನ್ನು ಮಾಜಿ ಮುಖ್ಯಮಂತ್ರಿ ಓಮರ್‌ ಅಬ್ದುಲ್ಲಾ ಆದಿಯಾಗಿ ಅನೇಕರು ಖಂಡಿಸಿದ್ದಾರೆ. ಕಾಶ್ಮೀರಿ ಪತ್ರಕರ್ತರಿಗೆ ಬಿಜೆಪಿ ಧಮಕಿ ಹಾಕುತ್ತಿದೆ. ಬುಖಾರಿ ಅವರ ಹತ್ಯೆಯು ಪತ್ರಕರ್ತರಿಗೆ ಧಮಕಿ ಹಾಕುವ ಅಸ್ತ್ರವಾಗಿ ಪರಿಣಮಿಸಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್‌ ವಕ್ತಾರ ರಣದೀಪ್‌ ಸುರ್ಜೇವಾಲಾ ಪ್ರತಿಕ್ರಿಯಿಸಿ, ಅಮಿತ್‌ ಶಾ ಅವರು ಇದಕ್ಕೆ ಜಮ್ಮು ರಾರ‍ಯಲಿಯಲ್ಲಿ ಉತ್ತರಿಸುತ್ತಾರಾ? ಎಂದು ಕೇಳಿದ್ದಾರೆ.

loader