ಶಿವಮೊಗ್ಗ [ಜು.14: ಸ್ಪೀಕರ್‌ ರಮೇಶ್‌ ಕುಮಾರ್‌ ಆಡಳಿತ ಪಕ್ಷದ ಕೈಗೊಂಬೆಯಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ಸ್ಪೀಕರ್‌ ಮೂಲಕ ಸಮಯ ಪಡೆದುಕೊಳ್ಳುವ ಪ್ರಯತ್ನವನ್ನು ಸರ್ಕಾರ ಮಾಡುತ್ತಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ ದೂರಿದ್ದಾರೆ. 

ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಮೇಶ್‌ಕುಮಾರ್‌ ಸುಪ್ರೀಂ ಕೋರ್ಟ್‌ ನೀಡಿದ ಆದೇಶವನ್ನು ತಮಗೆ ಬೇಕಾದಂತೆ ತಿರುಚುತ್ತಾರೆ. ಕಾನೂನನ್ನು ಹೇಗೆ ದುರುಪಯೋಗ ಪಡಿಸಿಕೊಳ್ಳಬಹುದು ಎಂಬ ಜ್ಞಾನವಿದೆ. ಬಹಳ ಬುದ್ಧಿವಂತರು. ಸರ್ಕಾರಕ್ಕೆ ನೆರವಾಗುತ್ತಿದ್ದಾರೆ ಎಂದು ಹರಿಹಾಯ್ದರು. 

ಕರ್ನಾಟಕ ರಾಜಕೀಯ ಪ್ರಹಸನದ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಅವರು ಸಮಯ ನೀಡಿದ್ದರಿಂದ ಕಾಂಗ್ರೆಸ್‌ ಇಬ್ಬರು ಶಾಸಕರ ಮನವೊಲಿಕೆ ಕಾರ್ಯ ಮಾಡುತ್ತಿದೆ. ಏನೇ ಕುತಂತ್ರ ಮಾಡಿದರೂ ಈ ಸರ್ಕಾರ ಉಳಿಯಲ್ಲ. ಇದರಲ್ಲಿ ನಾವೇನು ಪ್ರಯತ್ನ ಪಡಬೇಕಾಗಿಲ್ಲ. ಅವರವರೇ ಬಂದು ರಾಜೀನಾಮೆ ನೀಡುತ್ತಿದ್ದಾರೆ. ನಮ್ಮ ಶಾಸಕರನ್ನು ಸೆಳೆಯುವ ಯತ್ನ ಮಾಡಬಹುದು. ಹೀಗಾಗಿ ನಮ್ಮ ಶಾಸಕರೆಲ್ಲ ರೆಸಾರ್ಟ್‌ನಲ್ಲಿ ಒಟ್ಟಾಗಿ ಇದ್ದಾರೆ. ನಮ್ಮ ಯಾವ ಶಾಸಕರೂ ಯಾವ ಪಕ್ಷಕ್ಕೂ ಹೋಗುವುದಿಲ್ಲ ಎಂದರು.