ಜೈಪುರ: ಡಿಸೆಂಬರ್‌ನಲ್ಲಿ ನಡೆಯಲಿರುವ ರಾಜಸ್ಥಾನ ಚುನಾವಣೆಗೂ ಮುನ್ನ ಬಿಜೆಪಿಗೆ ಹಿನ್ನಡೆಯಾಗಿದ್ದು, ಹಿರಿಯ ಬಿಜೆಪಿ ಮುಖಂಡ ಜಸ್ವಂತ್ ಸಿಂಗ್ ಅವರ ಪುತ್ರ ಹಾಗೂ ಶಾಸಕ ಮಾನವೇಂದ್ರ ಸಿಂಗ್ ಬುಧವಾರದಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ.

ಬಾರ್ಮೇಡ್ ಶೇವೋ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಮಾನವೇಂದ್ರ ಸಿಂಗ್, ಕಳೆದ ತಿಂಗಳು ಆಯೋಜಿಸಿದ್ದ  ರ್ಯಾಲಿಯ ವೇಳೆ ತಾವು ಬಿಜೆಪಿ ತೊರೆಯುವುದಾಗಿ ಘೋಷಿಸಿದ್ದರು.

ಸಿಂಗ್ ಸೇರ್ಪಡೆಯಿಂದ ರಜಪೂತ ಮತಗಳನ್ನು ಪಡೆಯಲು ನೆರವಾಗಲಿದೆ ಎಂದು ಕಾಂಗ್ರೆಸ್ ಹೇಳಿಕೊಂಡಿದೆ. ರಾಜಕೀಯವಾಗಿ ಇದೊಂದು ತಪ್ಪು ನಿರ್ಧಾರ ಎಂದು ಬಿಜೆಪಿ ಹೇಳಿದೆ.