ಪ್ರತ್ಯೇಕ ರಾಜ್ಯದ ಕೂಗು ಯಾಕೆ ಏಳುತ್ತದೆ? ಮಾಜಿ ಸಿಎಂ ಹೇಳಿದ ಸಂಶೋಧನೆ
ಹಂಪಿ ಉತ್ಸವ ವಿಚಾರದಲ್ಲಿ ಜನಾರ್ದನ ರೆಡ್ಡಿ ಮತ್ತು ಡಿಕೆ ಶಿವಕುಮಾರ್ ನಡುವೆ ಜಟಾಪಟಿ ನಡೆಯುತ್ತಿದ್ದರೆ..ಜಗದೀಶ್ ಶೆಟ್ಟರ್ ಸಹ ಬ್ಯಾಟ್ ಬೀಸಿದ್ದಾರೆ. ಹಾಗಾದರೆ ಶೆಟ್ಟರ್ ಏನು ಹೇಳಿದ್ದಾರೆ.
ಬೆಂಗಳೂರು[ಡಿ.04] ಹಂಪಿ ಉತ್ಸವವನ್ನು ರಾಜ್ಯ ಸರ್ಕಾರ ಕಡೆಗಣಿಸಡಿದ್ದಕ್ಕೆ ಮಾಜಿ ಸಚಿವ ಜನಾರ್ದನ ರೆಡ್ಡಿ ಕೆಂಡಾಮಂಡಲವಾಗಿ ತಮ್ಮ ಫೇಸ್‌ಬುಕ್‌ನಲ್ಲಿ ಬರೆದಿದ್ದು ಅಲ್ಲದೆ ಸರ್ಕಾರ ದಿವಾಳಿಯಾಗಿದ್ದರೆ ತಾನೇ ಹಣ ಕೊಡುತ್ತೇನೆ ಎಂದು ಹೇಳಿದ್ದರು. ಇದಕ್ಕೆ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಸಹ ತಿರುಗೇಟು ನೀಡಿದ್ದರು.
ಆದರೆ ಇದೀಗ ಮಾಜಿ ಸಿಎಂ, ಬಿಜೆಪಿ ನಾಯಕ ಜಗದೀಶ್ ಶೆಟ್ಟರ್ ಅಖಾಡಕ್ಕೆ ಇಳಿದಂತೆ ಕಾಣುತ್ತಿದೆ. ಮಾಧ್ಯಮಗಳೊಂದಿಗೆ ಮಾತನಾಡಿರುವ ಶೆಟ್ಟರ್ ಹಂಪಿ ಉತ್ಸವದ ಬಗ್ಗೆ ತಮ್ಮ ಪ್ರತಿಕ್ರಿಯೆ ನೀಡುತ್ತಾ ಪರೋಕ್ಷವಾಗಿ ರಾಝ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ದಿವಾಳಿಯಾಗಿದ್ದರೆ ನಾನು ದುಡ್ಡು ಕೊಡ್ತೆನೆ..ಹಂಪಿ ಉತ್ಸವಕ್ಕೆ ರೆಡ್ಡಿ ಪಟ್ಟು
ಹಂಪಿ ಉತ್ಸವ ರದ್ದಾಗುವಂತದ್ದು ಏನಾಗಿದೆ. ಟಿಪ್ಪು ಜಯಂತಿ ಮಾಡಲು ಹಣವಿದೆ. ಹಂಪಿ ಉತ್ಸವಕ್ಕೆ ಯಾಕೆ ಹಣವಿಲ್ಲ? ಎಂದು ಶೆಟ್ಟರ್ ಪ್ರಶ್ನೆ ಮಾಡಿದ್ದಾರೆ. ಈ ರೀತಿ ಉತ್ತರ ಕರ್ನಾಟಕವನ್ನು ತಾತ್ಸಾರಕ್ಕೆ ದೂಡಿರುವುದರಿಂದಲೆ ಕೆಲವೆಡೆ ಪ್ರತ್ಯೇಕ ರಾಜ್ಯದ ಕೂಗು ಕೇಳಿ ಬರುತ್ತಿದೆ ಎಂದು ಶೆಟ್ಟರ್ ಹೇಳಿದ್ದಾರೆ.