Asianet Suvarna News Asianet Suvarna News

ಬಿಜೆಪಿ ಮುಖಂಡನ ದುರ್ವರ್ತನೆ: ಯುವಕ, ಯುವತಿಯ ದೃಶ್ಯ ಚಿತ್ರೀಕರಿಸಿ ಕಿರುಕುಳ

ಅವರಿಬ್ಬರು ಸ್ನೇಹಿತರು ನಿರ್ಜನ ಪ್ರದೇಶದಲ್ಲಿ ಕುಳಿತಿದ್ದರು. ಅಲ್ಲಿಗೆ ಬಂದ ಬಿಜೆಪಿ ಮುಖಂಡ ಬುದ್ದಿವಾದದ ನೆಪದಲ್ಲಿ ಯುವಕ - ಯುವತಿ ಮೇಲೆ ಹಲ್ಲೆ ನಡೆಸಿದ್ದಾನೆ ಜೊತೆಗೆ ವಿಡಿಯೋ ಕೂಡ ಚಿತ್ರೀಕರಿಸಿದ್ದಾನೆ. ಇದೀಗ ಆ ವಿಡಿಯೋ ವೈರಲ್ ಆಗಿದ್ದು, ಯುವತಿ ಬಿಜೆಪಿ ಮುಖಂಡನ ವಿರುದ್ಧ ದೂರು ನೀಡಿದ್ದಾಳೆ.

BJP Leader Gives Torture To Lovers
  • Facebook
  • Twitter
  • Whatsapp

ಶಿವಮೊಗ್ಗ(ಜೂ.03): ಅವರಿಬ್ಬರು ಸ್ನೇಹಿತರು ನಿರ್ಜನ ಪ್ರದೇಶದಲ್ಲಿ ಕುಳಿತಿದ್ದರು. ಅಲ್ಲಿಗೆ ಬಂದ ಬಿಜೆಪಿ ಮುಖಂಡ ಬುದ್ದಿವಾದದ ನೆಪದಲ್ಲಿ ಯುವಕ - ಯುವತಿ ಮೇಲೆ ಹಲ್ಲೆ ನಡೆಸಿದ್ದಾನೆ ಜೊತೆಗೆ ವಿಡಿಯೋ ಕೂಡ ಚಿತ್ರೀಕರಿಸಿದ್ದಾನೆ. ಇದೀಗ ಆ ವಿಡಿಯೋ ವೈರಲ್ ಆಗಿದ್ದು, ಯುವತಿ ಬಿಜೆಪಿ ಮುಖಂಡನ ವಿರುದ್ಧ ದೂರು ನೀಡಿದ್ದಾಳೆ.

ನಟರಾಜ್ ಎಂಬಾತ ಸಾಗರ ತಾಲೂಕಿನ ಬರೂರ್ ತಾಲೂಕು ಪಂಚಾಯ್ತಿ ಸದಸ್ಯೆಯ ಪತಿ. ಕಳೆದ 5-6 ತಿಂಗಳ ಹಿಂದೆ ಸಾಗರದಿಂದ ತ್ಯಾಗರ್ತಿ ಗ್ರಾಮದ ತನ್ನ ಸಹಚರರ ಜೊತೆ ಕಾರಿನಲ್ಲಿ ಹೋಗುತ್ತಿದ್ದ. ಈ ವೇಳೆ ರೈಲ್ವೆ ಹಳಿ ಬಳಿಯ ನಿರ್ಜನ ಪ್ರದೇಶದಲ್ಲಿ ಯುವಕ ಯುವತಿಯರಿಬ್ಬರು ಕುಳಿತಿದ್ದರು. ಇದನ್ನು ಕಂಡ ನಟರಾಜ್ ಹಾಗೂ ಆತನ ಸಹಚರರು ಯುವಕ- ಯುವತಿಗೆ ಬುದ್ಧಿವಾದ ಹೇಳುವ ನೆಪದಲ್ಲಿ ಹಲ್ಲೆ ಮಾಡಿ ಕಿರುಕುಳ ನೀಡಿದ್ದಾರೆ. ಕಾರಿನಲ್ಲಿ ಕರೆದೊಯ್ದು ಕಿರುಕುಳ ನೀಡಿ ದೃಶ್ಯ ಚಿತ್ರೀಕರಿಸಿದ್ದಾರೆ..

ಇದೀಗ ಆ ದೃಶ್ಯ ವ್ಯಾಟ್ಸಪ್‌'ನಲ್ಲಿ ಹರಿದಾಡುತ್ತಿದ್ದು, ಯುವತಿಯ ಬಾಳು ಹಾಳಾಗಿದೆ. ಇದರಿಂದ ನೊಂದ ಯುವತಿ ಬಲವಂತವಾಗಿ ಕಾರಿನಲ್ಲಿ ಕರೆದೊಯ್ದು ಅಸಭ್ಯವಾಗಿ ವರ್ತಿಸಿ ವಿಡಿಯೋ ಮಾಡಿದ್ದಾರೆಂದು ಸಾಗರ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದಾಳೆ. ಈ ಸಂಬಂಧ ಪೊಲೀಸರು ನಟರಾಜ್ ಹಾಗೂ ಇತರೆ ಮೂವರ ವಿರುದ್ಥ ಪ್ರಕರಣ ದಾಖಲಿಸಿದ್ದಾಳೆ.

ಆದರೆ ಈ ಪ್ರೇಮ ಪ್ರಸಂಗ ಪತ್ತೆ ಹಚ್ಚಿದ ಕಾಂಗ್ರೆಸ್, ಬಿಜೆಪಿ ಮುಖಂಡನ ವಿರುದ್ಧ ಪಿತೂರಿ ನಡೆಸಿ ದೂರು ದಾಖಲಿಸಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಪೊಲೀಸರ ವಿಚಾರಣೆ ಬಳಿಕ ಸತ್ಯ ಹೊರ ಬರಲಿದೆ.

 

Follow Us:
Download App:
  • android
  • ios