ದೆಹಲಿ ಬಿಜೆಪಿ ವಕ್ತಾರರೂ ಆಗಿರುವ ವಕೀಲ ಅಶ್ವಿನಿ ಕುಮಾರ್‌ ಉಪಾಧ್ಯಾಯ ಸಲ್ಲಿಸಿರುವ ಈ ಅರ್ಜಿ, ಮುಂದಿನ ವಾರ ವಿಚಾರಣೆಗೆ ಬರುವ ಸಾಧ್ಯತೆ ಇದೆ.
ದೆಹಲಿ ಬಿಜೆಪಿ ವಕ್ತಾರರೂ ಆಗಿರುವ ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ ಸಲ್ಲಿಸಿರುವ ಈ ಅರ್ಜಿ, ಮುಂದಿನ ವಾರ ವಿಚಾರಣೆಗೆ ಬರುವ ಸಾಧ್ಯತೆ ಇದೆ. ದೇಶದಲ್ಲಿ ಐಕ್ಯತೆ ಹಾಗೂ ರಾಷ್ಟ್ರೀಯ ತೆæ ಪ್ರೋತ್ಸಾಹಿಸಲು ಹಿಂದಿ ಕಲಿಕೆ ಅತ್ಯಗತ್ಯ. ಕರ್ನಾಟಕ, ತಮಿಳುನಾಡಿನಂತಹ ಹಿಂದಿಯೇತರ ರಾಜ್ಯಗಳಿಂದ ಬೇಡಿಕೆ ಬಂದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ 1968ರಲ್ಲಿ ರಾಜ್ಯಗಳ ಜತೆ ಸಮಾಲೋಚಿಸಿ ತ್ರಿಭಾಷಾ ಸೂತ್ರ ನೀತಿ ಜಾರಿಗೊಳಿಸಿತ್ತು. ಅದರ ಪ್ರಕಾರ, ಹಿಂದಿ ಭಾಷಿಕ ರಾಜ್ಯಗಳಲ್ಲಿ ಹಿಂದಿ, ಇಂಗ್ಲಿಷ್ ಹಾಗೂ ಆಧುನಿಕ ಭಾರತೀಯ ಭಾಷೆ ಕಲಿಸಬೇಕಿತ್ತು. ಹಿಂದಿಯೇತರ ರಾಜ್ಯಗಳಲ್ಲಿ ಹಿಂದಿ, ಇಂಗ್ಲಿಷ್ ಹಾಗೂ ಒಂದು ಪ್ರಾದೇಶಿಕ ಭಾಷೆ ಬೋಧಿಸಬೇಕಿತ್ತು. ಆದರೆ ಆ ನೀತಿ ಇನ್ನೂ ಜಾರಿಯಾಗಿಲ್ಲ ಎಂದು ದೂರಿದ್ದಾರೆ.
