ಬೆಳಗಾವಿ: ಕಾಂಗ್ರೆಸ್‌ನ ಬಂಡಾಯ ಶಾಸಕ ರಮೇಶ್ ಜಾರಕಿಹೊಳಿ ಏಕಾಂಗಿಯೋ, ಅಲ್ಲವೋ ಎಂಬುದು ಮೇ 23 ರ ನಂತರ ತಿಳಿಯುತ್ತದೆ ಎಂದು ಅವರ ಸಹೋದರ, ಅರಭಾವಿ ಕ್ಷೇತ್ರದ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ. ಈ ಮೂಲಕ ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ತಮ್ಮ ಶಕ್ತಿ ಪ್ರದರ್ಶಿಸಲಿದ್ದಾರೆ ಎಂದು ಪರೋಕ್ಷವಾಗಿ ಸುಳಿವು ನೀಡಿದ್ದಾರೆ. 

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಏಕಾಂಗಿಯಲ್ಲ. ಅವರು ಏಕಾಂಗಿಯಾ? ಇಲ್ಲವೇ ಅವರೊಂದಿಗೆ ಯಾರಿದ್ದಾರೆ? ಎಂಬುದು ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕವೇ ಗೊತ್ತಾಗಲಿದೆ ಎಂದು ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ. ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಿರುವ ಬಗ್ಗೆ ನನಗೆ ಗೊತ್ತಿಲ್ಲ ಎಂದ ಅವರು, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಂದ ನನಗೆ ಯಾವುದೇ ಆಫರ್ ಬಂದಿಲ್ಲ ಎಂದು ಸ್ಪಷ್ಟಪಡಿಸಿದರು. 

ಜಾರಕಿಹೊಳಿ ಕುಟುಂಬದ ವಿಚಾರಗಳು ಪ್ರಸ್ತಾಪವಾದಂತಹ ಸಂದರ್ಭದಲ್ಲಿ ಇತ್ಯರ್ಥ ಪಡಿಸುತ್ತೇನೆ. ಕುಟುಂಬದ ಜಗಳ ಬಗೆಹರಿಸುವುದಕ್ಕೆ  ನಾನು ಈಗಲೂ ಬದ್ಧನಿ ದ್ದೇನೆ. ರಾಜಕೀಯ ವಿಚಾರ ಬಂದಾಗ ಅವರ ಅಭಿಪ್ರಾಯಕ್ಕೆ ಪಟ್ಟಿದ್ದು ಎಂದರು. ಜಾರಕಿಹೊಳಿ ಕುಟುಂಬದಲ್ಲಿ ವಿರೋಧಿಗಳು ಹುಳಿ ಹಿಂಡುವ ಕೆಲಸ ಮಾಡುತ್ತಿದ್ದಾರೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಯಾರು ಕೂಡ ನಮ್ಮ ಕುಟುಂಬದಲ್ಲಿ
ಹುಳಿ ಹಿಂಡುವ ಕೆಲಸ ಮಾಡುತ್ತಿಲ್ಲ ಎಂದು ಹೇಳಿದರು.