ಬಿಜೆಪಿ ರಾಜ್ಯ ಸಮಿತಿ ಸದಸ್ಯನಾಗಿರುವ ವೆನ್ನಾಲ ಸಂಜೀವನ್ ನಿನ್ನೆ ರಾತ್ರಿ ಆರೆಸ್ಸೆಸ್ ಕಾರ್ಯಕರ್ತರಿಂದ ಹಲ್ಲೆಗೊಳಗಾಗಿದ್ದಾರೆ. ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದರಿಂದ ಅವರು ಕಾಲು ಮುರಿದುಕೊಂಡಿದ್ದಾರೆ, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆಯೆಂದು  ಪೊಲೀಸರು ಹೇಳಿದ್ದಾರೆ.

ಕೊಚ್ಚಿ (ಮೇ.08): ಕೇರಳದ ಕೊಚ್ಚಿಯಲ್ಲಿ ಆರೆಸ್ಸೆಸ್ ಕಾರ್ಯಕರ್ತರ ಗುಂಪೊಂದು ಬಿಜೆಪಿ ನಾಯಕನ ಮನೆಗೆ ಬಲವಂತವಾಗಿ ನುಗ್ಗಿ ಹಲ್ಲೆಗೈದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಬಿಜೆಪಿ ರಾಜ್ಯ ಸಮಿತಿ ಸದಸ್ಯನಾಗಿರುವ ವೆನ್ನಾಲ ಸಂಜೀವನ್ ನಿನ್ನೆ ರಾತ್ರಿ ಆರೆಸ್ಸೆಸ್ ಕಾರ್ಯಕರ್ತರಿಂದ ಹಲ್ಲೆಗೊಳಗಾಗಿದ್ದಾರೆ. ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದರಿಂದ ಅವರು ಕಾಲು ಮುರಿದುಕೊಂಡಿದ್ದಾರೆ, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆಯೆಂದು ಪೊಲೀಸರು ಹೇಳಿದ್ದಾರೆ.

ತ್ರಿಕ್ಕಕ್ಕರ ಘಟನೆಯಲ್ಲಿ ಸ್ಥಳೀಯ ಆರೆಸ್ಸೆಸ್ ಕಾರ್ಯಕರ್ತರ ಕೈವಾಡವಿದೆಯೆಂದು ಸಂಜೀವನ್ ಪೊಲೀಸರಿಗೆ ಹೇಳಿಕೆ ನೀಡಿದ್ದರೆನ್ನಲಾಗಿದೆ. ಬಳಿಕ ಪೊಲೀಸರು 4 ಮಂದಿ ಆರೆಸ್ಸೆಸ್ ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದರು. ಈ ವೈಶಮ್ಯದ ಹಿನ್ನಲೆಯಲ್ಲಿ ಸಂಜೀವನ್ ಮೇಲೆ ಹಲ್ಲೆ ನಡೆಸಿದ್ದಾರೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. - ಪಿಟಿಐ ವರದಿ

(ಸಾಂದರ್ಭಿಕ ಚಿತ್ರ)