ವಿಜಯಪುರ[ಜು. 06]  ಮೈತ್ರಿ ಪಕ್ಷದ ರೆಬಲ್ ಶಾಸಕರ ರಾಜೀನಾಮೆ ವಿಚಾರದಲ್ಲಿ ಬಿಜೆಪಿ ಶಾಸಕ ಎ. ಎಸ್. ಪಾಟೀಲ್ ನಡಹಳ್ಳಿ ಮತ್ತೊಂದು ಬಾಂಬ್ ಸಿಡಿಸಿದ್ದಾರೆ.

25 ಕ್ಕೂ ಅಧಿಕ ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿಲಿದ್ದಾರೆ. ಈ ಬಗ್ಗೆ ನನಗೆ ಮಾಹಿತಿ ಇದೆ. ಕಾಂಗ್ರೆಸ್ ನಲ್ಲಿ ಅನೇಕ ಜನ ಸ್ನೇಹಿತರಿದ್ದಾರೆ. ನನ್ನ ಜೊತೆ ಸಂಪರ್ಕದಲ್ಲಿದ್ದವರಿಗೆ ಕಾಂಗ್ರೆಸ್ ಬಿಟ್ಟು ಹೊರ ಬನ್ನಿ ಅಂತಾ ಹೇಳಿದ್ದೀನಿ ಎಂದು ಹೇಳಿದ್ದಾರೆ.

ದೋಸ್ತಿ ಖತಂ.. ಅಮೆರಿಕದಿಂದ ಬಂದ ತಕ್ಷಣ ಸಿಎಂ ಕುಮಾರಸ್ವಾಮಿ ರಾಜೀನಾಮೆ?

ಆ ಪಕ್ಷದಲ್ಲಿ ಏನಿಲ್ಲ, ನಾನು ಆಗಲೇ ತೀರ್ಮಾನ ಮಾಡಿ ಹೊರಗೆ ಬಂದಿದ್ದೀನಿ‌ ನೀವು ಹೊರಗೆ ಬನ್ನಿ ಅಂತಾ ಹೇಳಿದ್ದೀನಿ. ಕಾಂಗ್ರೆಸ್ ನಲ್ಲಿ ಜಾತಿ, ಹಣ ಬಿಟ್ಟರೇ ಬೇರೆನೂ ಇಲ್ಲ. ಅಲ್ಲಿನ ವಾತಾವರಣ ನೋಡಿ ಹೊರ ಬಂದಿದ್ದೇನೆ ಎಂದಿದ್ದಾರೆ.

ರಾಷ್ಟ್ರದ ತುಂಬಾ ಕಾಂಗ್ರೆಸ್ ನಾಶವಾಗಿದೆ. ರಾಜ್ಯದಲ್ಲೂ ಈಗ ಬೀಳುತ್ತೆ, ನಾಳೆ ಬೀಳುತ್ತೆ ಅನ್ನೋ ಪರಿಸ್ಥಿತಿ ಇದೆ ಎಂದು ಬಿಜಾಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಹಡಲಗೇರಿ ಗ್ರಾಮದಲ್ಲಿ ನಡಹಳ್ಳಿ ಹೇಳಿಕೆ ನೀಡಿದ್ದಾರೆ.