ಬೆಂಗಳೂರು[ಜು. 06]  ಅಮೆರಿಕ ಪ್ರವಾಸದಿಂದ ಹೊರಟಿರುವ ಕುಮಾರಸ್ವಾಮಿ ಮಂಗಳವಾರ ಶಾಸಕಾಂಗ ಸಭೆ ನಡೆಸಲಿದ್ದು ಸಭೆಯಲ್ಲಿಯೇ ವಿದಾಯ ಭಾಷಣ ಮಾಡಲಿದ್ದಾರೆ ಎಂದು ಹೇಳಲಾಗಿದೆ.

ಅಮೆರಿಕದಿಂದ ಈಗಾಗಲೇ ವಿಮಾನ ಏರಿರುವ ಸಿಎಂ ಭಾನುವಾರ  ರಾತ್ರಿ 8.30ಕ್ಕೆ ಬೆಂಗಳೂರಿಗೆ ಬಂದಿಳಿಯಲಿದ್ದಾರೆ. ಬಂದಿಳಿದ ನಂತರ ರಾಜೀನಾಮೆ ಅಧಿಕೃತ ಘೊಷಣೆ ಮಾಡುವ ಸಾಧ್ಯತೆ ಇದೆ.  ಶಾಸಕರನ್ನು ನಿಯಂತ್ರಣ ಅಸಾಧ್ಯ ಎಂಬುದನ್ನು ಮನಗಂಡಿರುವ ಸಿಎಂ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.

ಕರ್ನಾಟಕ ರಾಜಕಾರಣದಲ್ಲಿ ಬೆಳಗ್ಗೆಯಿಂದ ಏನೇನಾಯ್ತು?

ಜಂಟಿ ಶಾಸಕಾಂಗ ಸಭೆಯಲ್ಲಿಯೇ  ವಿದಾಯ ಭಾಷಣ ಮಾಡಿ  ನಂತರ ರಾಜ್ಯಪಾಲರ ಭೇಟಿ ಮಾಡಿ ರಾಜೀನಾಮೆ ಸಲ್ಲಿಸುವ ಸಾಧ್ಯತೆ ಹೆಚ್ಚಾಗಿದೆ.