36 `ಜಾದೂಗಾರರ ತಂಡ'ಗಳನ್ನು ಪ್ರಚಾರಕ್ಕಾಗಿ ಬಳಸಿಕೊಳ್ಳಲು ಬಿಜೆಪಿ ನಿರ್ಧರಿಸಿದೆ. ಮೂಲಕ ಹೊಸದಾದ ಪ್ರಯತ್ನವೊಂದನ್ನು ನಡೆಸಲು ತೀರ್ಮಾನಿಸಿದೆ.
ನವದೆಹಲಿ(ನ.23): ಇತ್ತೀಚೆಗೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುವಾಗ, `ಮೋದಿ ಅವರು ಗುಜರಾತ್ ನಲ್ಲಿ ಮಿಂಚಿ ಮರೆಯಾಗುವ ಜಾದೂಗಾರ' ಎಂದು ಕುಟುಕಿದ್ದರು.
ಇದನ್ನೇ ಸವಾಲಾಗಿ ಸ್ವೀಕರಿಸಿರುವ ಬಿಜೆಪಿ, ಈಗ 36 `ಜಾದೂಗಾರರ ತಂಡ'ಗಳನ್ನು ಪ್ರಚಾರಕ್ಕಾಗಿ ಬಳಸಿಕೊಳ್ಳಲು ನಿರ್ಧರಿಸಿದೆ. ಮೂಲಕ ಹೊಸದಾದ ಪ್ರಯತ್ನವೊಂದನ್ನು ನಡೆಸಲು ತೀರ್ಮಾನಿಸಿದೆ. ಈ ಜಾದೂಗಾರರ ತಂಡಗಳು 144 ಕ್ಷೇತ್ರಗಳ 800 ಗ್ರಾಮಗಳಲ್ಲಿ ಸಂಚರಿಸಲಿವೆ. ಮುಂದಿನ 20 ದಿನ ಜಾದೂ ಪ್ರದರ್ಶನವನ್ನು ನೀಡುತ್ತ ವಿಶಿಷ್ಟ ಬಗೆಯಲ್ಲಿ ಬಿಜೆಪಿ ಪರ ಜಾದೂಗಾರರು ಚುನಾವಣಾ ಪ್ರಚಾರ ನಡೆಸಲಿದ್ದಾರೆ.
