ಕಾಂಗ್ರೆಸ್ ನ ಕೆಲ ಪ್ರಮುಖ ಮುಖಂಡರಿಗೆ ಬಿಜೆಪಿ ಗಾಳ ಹಾಕಲು ತಯಾರಾಗಿದೆ ಎನ್ನುವ ಮಾತು ಜೋರಾಗಿದೆ. ಕೆಲ ಪ್ರಮುಖ ಹಾಲಿ ಸಚಿವರು ಹಾಗೂ ಕಾಂಗ್ರೆಸ್ ಪ್ರಭಾವಿ ಮುಖಂಡರನ್ನ ಚುನಾವಣೆ ಸಮಯದಲ್ಲಿ ಕಮಲ ಪಡೆ ತನ್ನ ತೆಕ್ಕೆಗೆ ಸೆಳೆಯಲು ಅಗತ್ಯವಿರುವ ಸಿದ್ಧತೆ ಮತ್ತು ಮಾತುಕತೆ ನಡೆಸಿದೆ ಎನ್ನಲಾಗಿದೆ.
ಬೆಂಗಳೂರು(ಸೆ.15): ಕಾಂಗ್ರೆಸ್ ನ ಕೆಲ ಪ್ರಮುಖ ಮುಖಂಡರಿಗೆ ಬಿಜೆಪಿ ಗಾಳ ಹಾಕಲು ತಯಾರಾಗಿದೆ ಎನ್ನುವ ಮಾತು ಜೋರಾಗಿದೆ. ಕೆಲ ಪ್ರಮುಖ ಹಾಲಿ ಸಚಿವರು ಹಾಗೂ ಕಾಂಗ್ರೆಸ್ ಪ್ರಭಾವಿ ಮುಖಂಡರನ್ನ ಚುನಾವಣೆ ಸಮಯದಲ್ಲಿ ಕಮಲ ಪಡೆ ತನ್ನ ತೆಕ್ಕೆಗೆ ಸೆಳೆಯಲು ಅಗತ್ಯವಿರುವ ಸಿದ್ಧತೆ ಮತ್ತು ಮಾತುಕತೆ ನಡೆಸಿದೆ ಎನ್ನಲಾಗಿದೆ.
ಬಿಜೆಪಿ ಸೆಳೆತಕ್ಕೆ ಒಳಗಾಗುವ ಕೈ ಮುಖಂಡರ ಪಟ್ಟಿ ದೊಡ್ಡದಾಗಿದ್ದು, ಅವರ ಹೆಸರು ಕೇಳಿದರೆ ಆಶ್ಚರ್ಯವಾಗೋದಂತೂ ಖಚಿತ. ಪ್ರಮುಖವಾಗಿ ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿರುವ ಮತ್ತು ಪಕ್ಷದ ಹಿರಿಯ ಮುಖಂಡ ಆರ್ ವಿ ದೇಶಪಾಂಡೆ, ಉಡುಪಿ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್, ಇಂಧನ ಸಚಿವ ಡಿ ಕೆ ಶಿವಕುಮಾರ್ ಇದರ ಜೊತೆಗೆ ಹಿರಿಯ ಶಾಸಕರಾದ ಎ ಬಿ ಮಲಕರೆಡ್ಡಿ, ಮಾಲೀಕಯ್ಯ ಗುತ್ತೇದಾರ, ಹಂಪನಗೌಡ ಬಾದರ್ಲಿ, ಸಿ ಪಿ ಯೋಗೀಶ್ವರ್, ಡಾ.ಸುಧಾಕರ್, ಶಿವಾನಂದ ಪಾಟೀಲ್ ಸೇರಿ ಇತರೆ ಮುಖಂಡರಿಗೆ ಬಿಜೆಪಿ ಗಾಳ ಹಾಕಲಿದೆ ಎನ್ನಲಾಗಿದೆ. ಅಲ್ಲದೇ, ಈ ಬಗ್ಗೆ ಖುದ್ದು ಸಿಎಂ ಸಿದ್ದರಾಮಯ್ಯ ಕೆಲವರಿಗೆ ಏನ್ರಿ ಬಿಜೆಪಿಗೆ ಹೋಗ್ತಾ ಇದ್ದೀರಾ ಅಂತಾ ವಿಚಾರಿಸಿದ್ದಾರೆ ಅಂತಾ ಹೇಳಲಾಗುತ್ತಿದೆ.
