Asianet Suvarna News Asianet Suvarna News

'ಆಕ್ರೋಶ್ ದಿವಸ್' ಪರ್ಯಾಯವಾಗಿ 'ಸಂಭ್ರಮ್ ದಿವಸ್' ಆಚರಿಸಲು ಬಿಜೆಪಿ ನಿರ್ಧಾರ

500 ಹಾಗೂ 1000 ನೋಟು ಬಂದ್ ಅವ್ಯವಸ್ಥೆ ವಿರೋಧಿಸಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಭಾರತ್ ಬಂದ್​ ಸಬಂಧ ಸಿಎಂ ಸಿದ್ರಾಮಯ್ಯ ಕೊಟ್ಟಿರೋ ರಿಯಾಕ್ಷನ್​. ಈ ಬಂದ್​ಗೆ ಬೆಂಬಲವಿಲ್ಲ ಅಂತ ಮುಖ್ಯಮಂತ್ರಿ ಹೇಳಿದರೂ ಆಪ್ತ ಮೂಲಗಳ ಪ್ರಕಾರ ಸುಳ್ಳು. ಕೇಂದ್ರದ ಬಿಜೆಪಿ ನಿಲುವು ಖಂಡಿಸಿ ನಾಳೆ ನಡೆಯಲಿರುವ ಹೋರಾಟ ಯಶಸ್ಸು ಮಾಡಲು ಕಾಂಗ್ರೆಸ್​ ಸರ್ಕಾರ ನಿರ್ಧರಿಸಿದೆ.

BJP Is Thinking To Celebrate Aakrosh Divas As Sambhram Divas

ನವದೆಹಲಿ(ನ.27): 500 ಹಾಗೂ 1000 ರುಪಾಯಿ ನೋಟ್ ನಿಷೇಧಿಸಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಖಂಡಿಸಿ ಪ್ರತಿಪಕ್ಷಗಳು ನಾಳೆ  ಭಾರತ್ ಬಂದ್​ಗೆ ಕರೆ ನೀಡಿವೆ. ಹಾಗಾದರೆ, ಬೆಂಬಲ ಕೊಟ್ಟಿರುವುದು ಯಾರು? ನಾಳೆ ಏನು ಸಿಗುತ್ತೆ? ಏನು ಸಿಗಲ್ಲ ಇಲ್ಲಿದೆ ವಿವರ.

ನಾಳೆ ಭಾರತ್ ಬಂದ್​: ಬಂದ್​'ಗೆ ಸರ್ಕಾರದ ಬೆಂಬಲ?

500 ಹಾಗೂ 1000 ನೋಟು ಬಂದ್ ಅವ್ಯವಸ್ಥೆ ವಿರೋಧಿಸಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಭಾರತ್ ಬಂದ್​ ಸಬಂಧ ಸಿಎಂ ಸಿದ್ರಾಮಯ್ಯ ಕೊಟ್ಟಿರೋ ರಿಯಾಕ್ಷನ್​. ಈ ಬಂದ್​ಗೆ ಬೆಂಬಲವಿಲ್ಲ ಅಂತ ಮುಖ್ಯಮಂತ್ರಿ ಹೇಳಿದರೂ ಆಪ್ತ ಮೂಲಗಳ ಪ್ರಕಾರ ಸುಳ್ಳು. ಕೇಂದ್ರದ ಬಿಜೆಪಿ ನಿಲುವು ಖಂಡಿಸಿ ನಾಳೆ ನಡೆಯಲಿರುವ ಹೋರಾಟ ಯಶಸ್ಸು ಮಾಡಲು ಕಾಂಗ್ರೆಸ್​ ಸರ್ಕಾರ ನಿರ್ಧರಿಸಿದೆ. ಇನ್ನೂ ಬಂದ್ ದಿನ  ಏನೆಲ್ಲಾ ಸಿಗುತ್ತದಾ ಎನ್ನುವುದನ್ನು ನೋಡುವುದಾದರೇ

ನಾಳೆ ಭಾರತ ಬಂದ್: ಇವೆಲ್ಲಾ ಸಿಗುತ್ತೆ

ಹಾಲು, ಪೇಪರ್​, ಆಸ್ಪತ್ರೆ, ಔಷಧಿ ಎಂದಿನಂತೆ ಮಾರುಕಟ್ಟೆ ವಹಿವಾಟು, ರೈಲು ಸೇವೆ ನಿರಾತಂಕ

ನಾಳೆ ಭಾರತ ಬಂದ್: ಈ ಸೇವೆ ಅನುಮಾನ 

- ಬಿಎಂಟಿಸಿ ,ಕೆಎಸ್​ಆರ್​ಟಿಸಿ , ಮೆಟ್ರೋ

- ಸರ್ಕಾರಿ ಕಚೇರಿ ಸೇವೆ ಅನುಮಾನ

-ಬೆಸ್ಕಾಂ, ಬಿಡಬ್ಲ್ಯೂಎಸ್​ಎಸ್​ಬಿ ಸೇವೆ ಡೌಟ್​

- ಪೆಟ್ರೋಲ್ ​, ಸಿನಿಮಾ ಪ್ರದರ್ಶನ ಸ್ಪಷ್ಟನೆ ಇಲ್ಲ

- ಅಂಗಡಿ-ಮುಂಗಟ್ಟು ವಹಿವಾಟು ಅನುಮಾನ

- ಶಾಲಾ-ಕಾಲೇಜು ಕಾರ್ಯನಿರ್ವಹಣೆ ಇಲ್ಲ?

- ಹೋಟೆಲ್​, ಬ್ಯಾಂಕ್​ ಸೇವೆ ಬಗ್ಗೆ  ಸ್ಪಷ್ಟತೆ ಇಲ್ಲ

ಈ ಮಧ್ಯೆ ನೋಟು ಬಂದ್​'ನಿಂದ ಆಗಿರುವ ಅವ್ಯವಸ್ಥೆಯನ್ನು ಪರಿಗಣಿಸಿ ಕನ್ನಡ ಚಳವಳಿ ಪಕ್ಷದ ವಾಟಾಳ್​ ನಾಗರಾಜ್​ ಸಹ ಬಂದ್​ಗೆ ಬೆಂಬಲ ನೀಡಿದ್ದಾರೆ. ಆದರೆ ಮೋದಿ ಅಭಿಮಾನಿಗಳು ಸೋಮವಾರದಿಂದ ಸಂಭ್ರಮ ದಿವಸ ಆಚರಿಸುತ್ತಿದ್ದಾರೆ.

ಒಟ್ನಲ್ಲಿ , ಆಕ್ರೋಶ್​ ದಿವಸ್​ ಎಂದರೆ ಭಾರತ್ ಬಂದ್​ ಯಶಸ್ವಿಯಾಗಲು ರಾಜ್ಯ ಸರ್ಕಾರ ಸಿದ್ಧತೆಯನ್ನು ತೆರೆಮರೆಯಲ್ಲಿ ಮಾಡಿಕೊಳ್ತಿದೆ. ಆದ್ರೆ, ಬಿಜೆಪಿ ಸೇರಿ ವಿವಿಧ ಸಂಘಟನೆಗಳು ಬೆಂಬಲ ಘೋಷಸದಿರುವುದು ಅಷ್ಟು ಪರಿಣಾಮ ಬೀರಲ್ಲ ಅಂತ ಹೇಳಲಾಗುತ್ತಿದೆ.

 

Follow Us:
Download App:
  • android
  • ios