ಬಿಜೆಪಿ ಈ ದೇಶದ ಕ್ಯಾನ್ಸರ್; ಬೇರೆ ಪಕ್ಷಗಳು ನೆಗಡಿ, ಜ್ವರವಿದ್ದಂತೆ

BJP Is Like  Cancer Says Prakash Rai
Highlights

  • ಬಿಜೆಪಿ ಈ ದೇಶದ ಕ್ಯಾನ್ಸರ್, ಅದನ್ನು ತೆಗೆದು ಹಾಕೋಣ, ಬಳಿಕ ನೆಗಡಿ- ಕೆಮ್ಮು ವಾಸಿ ಮಾಡ್ಕೋಳೋಣ.
  • ಸಂವಿಧಾನ ವಿರೋಧಿಸುವ ಸಚಿವ ನಮಗೆ ಬೇಡ. ನಾಟಕ ಮಾಡುವ ಪ್ರಧಾನಿ ನಮಗೆ ಬೇಡ. ಸೊಂಟದ ಕೆಳಗಿನ ಭಾಷೆ ಬಳಸುವ ಸಂಸದ ಪ್ರತಾಪ ಸಿಂಹ ನಮಗೆ ಬೇಡ

ಹುಬ್ಬಳ್ಳಿ : ಬಹುಭಾಷಾ ನಟ ಪ್ರಕಾಶ‌ ರಾಜ್, ಬಿಜೆಪಿ ವಿರುದ್ಧ ಮತ್ತೆ ತೀವ್ರ‌ ವಾಗ್ದಾಳಿ ನಡೆಸಿದ್ದಾರೆ.

ಹುಬ್ಬಳ್ಳಿಯಲ್ಲಿ ಸಾರ್ವಜನಿಕರೊಂದಿಗೆ ನಡೆದ ಸಂವಾದದಲ್ಲಿ ಪ್ರಕಾಶ ರೈ,  ನಾವೂ ಯಾರನ್ನೇ ಆದರೂ ಪ್ರಶ್ನೆ ಮಾಡದೇ ಒಪ್ಪಿಕೊಳ್ಳಬಾರದು. ಸದಾಕಾಲ ಪ್ರಶ್ನಿಸೋದನ್ನು ಮರೆಯಬಾರದು. ಬಿಜೆಪಿ ವಿರುದ್ಥ ಪ್ರಶ್ನಿಸಿದ್ರೇ ನನ್ನನ್ನು ಕಾಂಗ್ರೆಸ್ ಏಜೆಂಟ್ ಅಂತಾರೆ.‌ ನಾನು ಯಾವ ಪಕ್ಷಕ್ಕೂ ಸೀಮಿತವಾಗಿಲ್ಲ. ನಾನು ಈ ದೇಶದ ನಾಗರಿಕ ಪ್ರಶ್ನಿಸೋದು ನನ್ನ ಹಕ್ಕು, ಎಂದಿದ್ದಾರೆ.

ನನ್ನ ತಾಯಿ ಕ್ರಿಶ್ಚಿಯನ್, ಪತ್ನಿ ಹಿಂದು. ಆದರೂ ಅವರೊಂದಿಗೆ ನೆಮ್ಮದಿಯಾಗಿ ಬದುಕಿರುವೆ. ನಾನು ಮನುಷ್ಯರಾಗಿ ಅವರೊಂದಿಗೆ ಬದುಕುತ್ತಿದ್ದೇನೆ. ಅವರನ್ನು ದ್ವೇಷಿಸೋದಿಲ್ಲ. ನಾನು ಬಲಪಂಥೀಯ ‌ವಿರೋಧಿ ಅನ್ನೋದಕ್ಕೆ ಡೌಟ್ ಯಾಕೆ? ನಾನು ನಿಮ್ಮ ವಿರೋಧಿಯೇ.., ಎಂದು ಪ್ರಕಾಶ್ ರೈ ಹೇಳಿದ್ದಾರೆ.

ನನ್ನ ಹೆತ್ತವರ ಬಗೆಗಿನ ರಕ್ತ‌ ಕೇಳುವ ಕೇಂದ್ರ‌ ಸಚಿವ ನಮಗೆ ಬೇಡ. ನನ್ನ‌ ಹೆತ್ತವಳನ್ನು ಪಾಕಿಸ್ತಾನಕ್ಕೆ ಕಳುಹಿಸ್ತೇನೆ‌ ಎಂದಿರುವ ಸಚಿವ ನಮಗೆ ಬೇಡ. ನನ್ನ ಹೆತ್ತವಳು ಮಹಾ ಮಾತೆ.‌ ಯಾಕಂದ್ರೇ, ನನ್ನಂಥ ಮಗನನ್ನು ಈ ಭೂಮಿಗೆ‌ ತಂದಿದ್ದಾಳೆ. ಸಂವಿಧಾನ ವಿರೋಧಿಸುವ ಸಚಿವ ನಮಗೆ ಬೇಡ. ನಾಟಕ ಮಾಡುವ ಪ್ರಧಾನಿ ನಮಗೆ ಬೇಡ. ಸೊಂಟದ ಕೆಳಗಿನ ಭಾಷೆ ಬಳಸುವ ಸಂಸದ ಪ್ರತಾಪ ಸಿಂಹ ನಮಗೆ ಬೇಡ, ಎಂದು ಎಂದು ರೈ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ಯುಪಿ ಸಿಎಂ ಧರ್ಮದ ಹೆಸರಿನಲ್ಲಿ ಶಾಲಾ ಮಕ್ಕಳ ವಾಹನ ಮಕ್ಕಳ ಮೇಲೆ ಕಲ್ಲೆಸೆಯಲು ಪ್ರೇರಿಪಿಸ್ತಾರೆ. ಬರೀ ಬಿಜೆಪಿ‌ ವಿರುದ್ಧ ಮಾತ್ರ ಮಾತಾಡ್ತೀರಿ ಎಂದು ನನ್ನನ್ನು ಪ್ರಶ್ನೀಸ್ತಾರೆ. ಬಿಜೆಪಿ ಈ ದೇಶದ ಕ್ಯಾನ್ಸರ್. ಬೇರೆ ಪಕ್ಷಗಳು ನೆಗಡಿ, ಜ್ವರವಿದ್ದಂತೆ. ಮೊದಲು ಕ್ಯಾನ್ಸರಾಗಿರೋ ಬಿಜೆಪಿ ವಿರುದ್ಧ ನಮ್ಮ ಹೋರಾಟ. ದೇಶದ ಕ್ಯಾನ್ಸರ್ ರೋಗ ತೆಗೆದು ಹಾಕಿ. ಆಮೇಲೆ ನೆಗಡಿ- ಕೆಮ್ಮು ವಾಸಿ ಮಾಡ್ಕೋಳೋಣ. ದೇಶದ ಕ್ಯಾನ್ಸರಾಗಿರೋ ಬಿಜೆಪಿ ಯನ್ನು ಕಿತ್ತೊಗೆಯಬೇಕು. ಯಾವುದೇ ಕಾರಣಕ್ಕೂ ಕರ್ನಾಟಕದಲ್ಲಿ ಮತ್ತೆ‌ ಬಿಜೆಪಿ ಎಂಬ ಕ್ಯಾನ್ಸರ್ ಅಧಿಕಾರಕ್ಕೆ ಬರಲು ಬಿಡಬಾರದು, ಎಂದು ರೈ ಕರೆಕೊಟ್ಟಿದ್ದಾರೆ.

ಕರ್ನಾಟಕ ರಾಜ್ಯದ ಪರವಾಗಿ ಕಾವೇರಿ ತೀರ್ಪು ಬಂದಿರುವುದು ತಮ್ಮ ಗಮನಕ್ಕೆ ಬಂದಿದ್ದು, ಖುಷಿ ಹಾಗೂ ಸಮಾಧಾನ ತಂದಿದೆ. ಇನ್ಮುಂದಾದರೂ ಕಾವೇರಿ ವಿಷಯವಾಗಿ ರಾಜಕಾರಣಿಗಳು ತಮ್ಮ ರಾಜಕೀಯವನ್ನು ನಿಲ್ಲಿಸಲಿ.

-ಪ್ರಕಾಶ ರೈ

ಕೇಂದ್ರ ಸಚಿವ ಅನಂತಕುಮಾರ ಹೆಗ್ಡೆ ರಕ್ತ ರಕ್ತ ಅಂತ ಹೇಳ್ತಾರೆ. ರಕ್ತದ ಬಗ್ಗೆ ಪದೇಪದೆ ಮಾತಾಡ್ತಾರೆ. ಅನಂತಕುಮಾರ ‌ಹೆಗ್ಡೆ ಈ ಮಣ್ಣಲ್ಲಿ ಜ್ಞಾನವಿದೆ ಜ್ಞಾನವಿದೆ ಅಂತಾರೆ. ಇನ್ಮೇಲೆ ಅದೇ ಮಣ್ಣು ಅವರಿಗೆ ತಿನ್ನಿಸ್ಬೇಕು. ಗೋವು ಗೋವು ಗೋವು ಅಂತಾ ಹೇಳ್ತಾರೆ. ನಾವು ಇನ್ಮೇಲೆ ಅಂಬಾ ಅಂಬಾ ‌ಅಂಬಾ ಅಂತ ನಾವು ಹೇಳ್ಬೇಕು. ನಾವು ಅವರ ವಿರುದ್ಧ ಗಂಭೀರ ಹೋರಾಟ ಮಾಡ್ಬಾರದು. ಅವರ ‌ವಿರುದ್ಧ ಮಜಾ ತಗೋಬೇಕು. ಗೋವು ಯಾವಾಗ ಹಿಂದೂ ವಾಯಿತು. ಕುರಿ‌ ಯಾವಾಗ ಮುಸ್ಲಿಮಾಯಿತು. ಹಸಿರು ಯಾವಾಗ ಮುಸ್ಲಿಮಾಯಿತು. ಕೇಸರಿ ಯಾವಾಗ ನಿಮ್ಮದಾಯಿತು. ಬಣ್ಣ ಬಣ್ಣಗಳಿಗೂ ಜಾತ್ರಿ ಬಂತು. ಪ್ರಾಣಿಗಳಿಗೂ ಯಾವಾಗ ಧರ್ಮ ಬಂತು, ಎಂದು ರೈ ಪ್ರಶ್ನಿಸಿದ್ದಾರೆ.

 

 

loader