ಕೊಡಗು [ಜೂ.28] : ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನವು ಒಂದು ಹುದ್ದೆಯಲ್ಲ, ಅದೊಂದು  ಸಂಘಟನೆ ಕಟ್ಟುವಂತಹ ದೊಡ್ಡ ಜವಾಬ್ದಾರಿ ಎಂದು ಬಿಜೆಪಿ ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ಹೇಳಿದ್ದಾರೆ. 

ಕೊಡಗಿನಲ್ಲಿ ಮಾತನಾಡಿದ ಸಿ.ಟಿ.ರವಿ ಅಧ್ಯಕ್ಷ ಸ್ಥಾನವು ಒಂದು ಹುದ್ದೆಯಾಗಿದ್ದರೆ ಅದಕ್ಕೆ ಸಾಕಷ್ಟು ಪೈಪೋಟಿ ಇರುತಿತ್ತು. ಅಧ್ಯಕ್ಷತೆಯನ್ನು ಯಾರಿಗೆ ಕೊಡಬೇಕು ಎಂದು ಹಿರಿಯರು ನಿರ್ಧಾರ ಮಾಡುತ್ತಾರೆ. ಈ ಸ್ಥಾನದಲ್ಲಿ ಕೂರಲು ಯೋಗ್ಯತೆ ಇರುವ ಅನೇಕರಿದ್ದಾರೆ ಎಂದು ಹೇಳಿದರು. 

ನಮ್ಮನ್ನೇ ನಾವು ಹೊಗಳಿಕೊಳ್ಳುವುದು ತಪ್ಪು, ಜೊತೆಗೆ ಕೀಳರಿಮೆಯಿಂದ ಇರುವುದೂ ಕೂಡ ತಪ್ಪು. ಯಾರು ಯಾವ ಸಂದರ್ಭಕ್ಕೆ ಸರಿಯಾಗುತ್ತಾರೋ ಅವರಿಗೆ ಹುದ್ದೆ ಸಿಗುತ್ತದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.