ಅಲ್ಲದೆ ರೆಡ್ಡಿ ಪುತ್ರಿ ವಿವಾಹದ ವೆಚ್ಚಕ್ಕಾಗಿ ಕಪ್ಪುಹಣ ಬಳಕೆಯಾಗಿರುವ ಬಗ್ಗೆ ಆರೋಪ ಕೇಳಿಬಂದಿದೆ.
ಬೆಂಗಳೂರು(ನ.15): ಜನಾರ್ದನ ರೆಡ್ಡಿ ಪತ್ರಿ ಮದುವೆಗೆ ರಾಜ್ಯ ಬಿಜೆಪಿ ನಾಯಕರು ಹೋಗಬಾರದೆಂದು ಬಿಜೆಪಿ ಹೈಕಮಾಂಡ್ ಖಡಖ್ ಸೂಚನೆ ನೀಡಿದೆ. ಕಪ್ಪು ಹಣದ ವಿರುದ್ಧ ಹೋರಾಟ ನಡೆಸುತ್ತಿರುವುದರಿಂದ ಈ ಸ್ಥತಿಯಲ್ಲಿ ರೆಡ್ಡಿ ಮಗಳ ವಿವಾಹಕ್ಕೆ ಹೋಗುವುದು ಬೇಡ ಎಂದು ಸೂಚಿಸಿದೆ. ಅಲ್ಲದೆ ರೆಡ್ಡಿ ಪುತ್ರಿ ವಿವಾಹದ ವೆಚ್ಚಕ್ಕಾಗಿ ಕಪ್ಪುಹಣ ಬಳಕೆಯಾಗಿರುವ ಬಗ್ಗೆ ಆರೋಪ ಕೇಳಿಬಂದಿದೆ. ಮೈಸೂರಿನಲ್ಲಿ ಆರೋಪ ಮಾಡಿರುವ ಸಿಎಂ ಸಿದ್ದರಾಮಯ್ಯ ಅವರು ವಿವಾಹದ ವೆಚ್ಚದ ಕುರಿತು ಐಟಿ ತನಿಖೆಗೂ ಆಗ್ರಹಿಸಿದ್ದಾರೆ. ಬಹುತೇಕ ಕಾಂಗ್ರೆಸ್ ನಾಯಕರು ಸಹ ಆರೋಪಿಸಿರುವ ಹಿನ್ನೆಲೆಯಲ್ಲಿ ರೆಡ್ಡಿಯ ಪುತ್ರಿಯ ವಿವಾಹದಲ್ಲಿ ಭಾಗಿಯಾಗುವುದು ಸರಿಯಲ್ಲ ಎಂದು ರಾಜ್ಯ ಬಿಜೆಪಿ ನಾಯಕರಿಗೆ ಬಿಜೆಪಿ ಹೈಕಮಾಂಡ್ ಸ್ಪಷ್ಟ ಆದೇಶ ನೀಡಿದೆ. ಬೆಂಗಳೂರು ಅರಮನೆ ಮೈದಾನದಲ್ಲಿ ನಾಳೆ ಹಾಗೂ ನಾಡಿದ್ದು ಜನಾರ್ದನ ರೆಡ್ಡಿ ಪುತ್ರಿ ಬ್ರಹ್ಮಣಿ ಮದುವೆ ನಡೆಯಲಿದೆ.
