ಕೃಷ್ಣರಾಜಪುರ [ಜು.29]: ಭಾರತೀಯ ಜನತಾ ಪಾರ್ಟಿ ಈಗ ರಾಷ್ಟ್ರದೆಲ್ಲೆಡೆ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ ಎಂದು ರಾಜ್ಯ ಬಿಜೆಪಿ ಯುವಮೊರ್ಚ ಪ್ರದಾನ ಕಾರ್ಯದರ್ಶಿ ಬಿ.ವೈ.ವಿಜೇಯೆಂದ್ರ ತಿಳಿಸಿದರು.

ಮಹದೇವಪುರದ ಫಿನಿಕ್ಸ್‌ ಮಾರ್ಕೆಟ್‌ ಸಿಟಿ ಆವರಣದಲ್ಲಿ ಕೆ.ಆರ್‌.ಪುರ ಹಾಗೂ ಮಹದೇವಪುರ ಬಿಜೆಪಿ ಯುವಮೊರ್ಚ ವತಿಯಿಂದ ಹಮ್ಮಿಕೊಂಡಿದ್ದ ಸಂಘಟನಾ ಸರ್ವ ಸದಸ್ಯತಾ ಅಭಿಯಾನದಲ್ಲಿ ಭಾಗವಹಿಸಿ ಮತನಾಡಿದರು. ದೇಶದ ಬೆನ್ನೆಲುಬು ಯುವಕರಾಗಿದ್ದು, ಯಾವುದೇ ಜಾವಬ್ದಾರಿ ವಹಿಸಿದರು ನಿರ್ವಹಿಸುವ ಸಾಮರ್ಥ್ಯವಿರುತ್ತದೆ. ಬಿಜೆಪಿ ಪಕ್ಷ ದೇಶದಲ್ಲಿನ ಯುವಕರಿಗೆ ವಿಶೇಷ ಪ್ರೋತ್ಸಾಹ ನೀಡುತ್ತಾ ಬಂದಿದೆ. ಯುವಕರು ದೇಶದಲ್ಲಿ ಹಲವಾರು ಸಮಸ್ಯೆಗಳ ಬಗ್ಗೆ ಚಿಂತನೆಯನ್ನಿಟ್ಟು ಅವುಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಬೇಕು ಎಂದು ಹೇಳಿದರು.

ಬೆಂಗಳೂರು ನಗರ ಜಿಲ್ಲಾ ಸಂಚಾಲಕ ಅಶೋಕ ಕುಮಾರ್‌ ಮಾತನಾಡಿ, ನರೇಂದ್ರ ಮೋದಿ ಅವರು ಉತ್ತಮ ಅಡಳಿತ ನೀಡಿದ್ದರಿಂದ ಮತ್ತೊಮ್ಮೆ ಸುಭದ್ರ ಸರ್ಕಾರ ರಚನೆಯಾಗಿದೆ ಎಂದರು. ನಗರ ಜಿಲ್ಲಾ ಅಧ್ಯಕ್ಷ ನವೀನ ರೆಡ್ಡಿ, ರಾಜಾರೆಡ್ಡಿ, ವೆಂಕಟಸ್ವಾಮಿರೆಡ್ಡಿ, ಮಹೇಂದ್ರ ಮೋದಿ, ರಾಜೇಶ್‌ ಇದ್ದರು.