ತಮಿಳುನಾಡಿನಲ್ಲಿ ಬೇರೂರಲು ಹರಸಾಹಸ ಪಡುತ್ತಿರುವ ಬಿಜೆಪಿಗೆ, ರಾಜ್ಯದ ಮತದಾರರು ಮತ್ತೊಮ್ಮೆ ಶಾಕ್ ನೀಡಿದ್ದಾರೆ.

ಚೆನ್ನೈ(ಡಿ.25): ತಮಿಳುನಾಡಿನಲ್ಲಿ ಬೇರೂರಲು ಹರಸಾಹಸ ಪಡುತ್ತಿರುವ ಬಿಜೆಪಿಗೆ, ರಾಜ್ಯದ ಮತದಾರರು ಮತ್ತೊಮ್ಮೆ ಶಾಕ್ ನೀಡಿದ್ದಾರೆ.

ಆರ್.ಕೆ.ನಗರ ಕ್ಷೇತ್ರದ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ, ನೋಟಾಕ್ಕಿಂತ ಕಡಿಮೆ ಮತ ಚಲಾವಣೆಯಾಗಿದೆ. ನೋಟಾಕ್ಕೆ 2373 ಮತ ಬಿದ್ದಿದ್ದರೆ, ಬಿಜೆಪಿ ಅಭ್ಯರ್ಥಿ ಕರು ನಾಗರಾಜನ್‌ಗೆ ಕೇವಲ 1417 ಮತ ಬಿದ್ದಿದೆ. ನಿನ್ನೆಯಷ್ಟೇ ಆರ್.ಕೆ ನಗರದ ಫಲಿತಾಂಶ ಹೊರಬಿದ್ದಿದ್ದು, ಈ ಕ್ಷೇತ್ರದಲ್ಲಿ ಶಶಿಕಲಾ ಬಣದ ಟಿಟಿವಿ ದಿನಕರನ್ ಅವರು ವಿಜಯ ಸಾಧಿಸಿದ್ದಾರೆ.