ಅರುಣಾಚಲ ಪ್ರದೇಶ ರಾಜಕೀಯಯದಲ್ಲಿ ಬದಲಾವಣೆ ಗಾಳಿ ಬೀಸಿದೆ. ಮುಖ್ಯಮಂತ್ರಿ ಪೇಮಾ ಖಂಡು 33 ಜನ ಶಾಸಕರೊಂದಿಗೆ ಇಂದು ಭಾರತೀಯ ಜನತಾ ಪಕ್ಷಕ್ಕೆ ಸೇರಿದ್ದಾರೆ.
ನವದೆಹಲಿ (ಡಿ. 31): ಅರುಣಾಚಲ ಪ್ರದೇಶ ರಾಜಕೀಯಯದಲ್ಲಿ ಬದಲಾವಣೆ ಗಾಳಿ ಬೀಸಿದೆ. ಮುಖ್ಯಮಂತ್ರಿ ಪೇಮಾ ಖಂಡು 33 ಜನ ಶಾಸಕರೊಂದಿಗೆ ಇಂದು ಭಾರತೀಯ ಜನತಾ ಪಕ್ಷಕ್ಕೆ ಸೇರಿದ್ದಾರೆ.
“ಅರುಣಾಚಲ ಪ್ರದೇಶದಲ್ಲಿ ಕಡೆಗೂ ಕಮಲ ಅರಳಿದೆ. ಹೊಸ ವರ್ಷದಲ್ಲಿ ಹೊಸ ಸರ್ಕಾರದಲ್ಲಿ ರಾಜ್ಯದ ಜನ ಅಭಿವೃದ್ಧಿಯನ್ನು ಕಾಣಲಿದ್ದಾರೆ" ಎಂದು ಖಂಡು ಹೇಳಿದ್ದಾರೆ.
ಪಕ್ಷವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಪೇಮಾ ಖಂಡು ಸೇರಿದಂತೆ 6 ಜನ ಶಾಸಕರನ್ನು ಪಿಪಿಎ ಪಕ್ಷದಿಂದ ಅಮಾನತುಗೊಳಿಸಲಾಗಿತ್ತು.
ಖಂಡು 33 ಮಂದಿ ಶಾಸಕರೊಂದಿಗೆ ಬಿಜೆಪಿಗೆ ಸೇರಿದ್ದಾರೆ. ಅರುಣಾಚಲ ವಿಧಾನಸಭಾ ಚುನಾವನೆಯಲ್ಲಿ ಬಿಜೆಪಿ 60 ಸ್ಥಾನಗಳನ್ನು ಗೆದ್ದು ಹೊಸ ಸರ್ಕಾರವನ್ನು ರಚಿಸಲಿದೆ. ಪೀಮಾ ಖಂಡು ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ ಎಂದು ಬಿಜೆಪಿ ಅಧ್ಯಕ್ಷ ತಾಪಿರ್ ಗಾವ್ ಹೇಳಿದ್ದಾರೆ.
