ಗುಜರಾತ್‌ನಲ್ಲಿ ಬಂಡಾಯವೆದ್ದಿರುವ ಪಕ್ಷದ 24 ನಾಯಕರನ್ನು ಬಿಜೆಪಿ ಅಮಾನತುಗೊಳಿಸಿದೆ.
ಗಾಂಧೀನಗರ: ಗುಜರಾತ್ನಲ್ಲಿ ಬಂಡಾಯವೆದ್ದಿರುವ ಪಕ್ಷದ 24 ನಾಯಕರನ್ನು ಬಿಜೆಪಿ ಅಮಾನತುಗೊಳಿಸಿದೆ. ಟಿಕೆಟ್ ನೀಡದ್ದಕ್ಕೆ ಸ್ವತಂತ್ರ ಅಭ್ಯರ್ಥಿಯಾಗಿ ಅಥವಾ ಪ್ರತಿಪಕ್ಷ ಗಳಲ್ಲಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಮುಖಂಡರನ್ನು ಅಮಾನತುಮಾಡಲಾಗಿದೆ.
ಮಾಜಿ ಸಂಸದರು, ಶಾಸಕರು, ಜಿಲ್ಲಾ, ತಾಲೂಕು ಪಂಚಾಯತ್ ಅಧ್ಯಕ್ಷರು ಅಮಾನತಾದವರ ಸೇರಿದ್ದಾರೆ. ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದ್ದ ಗುರುವಾರ ಈ ನಾಯಕರು ತಮ್ಮ ಉಮೇದುವಾರಿಕೆಯನ್ನು ಹಿಂಪಡೆದಿರಲಿಲ್ಲ. ಹೀಗಾಗಿ ಬಿಜೆಪಿ ಕ್ರಮ ಕೈಗೊಂಡಿದೆ
