ಬಿಜೆಪಿಯಲ್ಲಿ ಬಿರುಸಿನ ಚಟುವಟಿಕೆ : ಪ್ರಮೋದ್ ಮದ್ವರಾಜ್ ಏನಂದ್ರು ?

BJP Election Curcus
Highlights

ಬಹುತೇಕ ಮುಂದಿನ ವಾರದ ಕೊನೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಲಿದೆ. ಅಭ್ಯರ್ಥಿಗಳ ಅಂತಿಮ ಪಟ್ಟಿ ಬಿಡುಗಡೆಗೆ ಕ್ಷಣಗಣವೆ ಆರಂಭವಾಗ್ತಿದ್ದ ಹಾಗೆಯೇ  ಬಿಜೆಪಿ ಸೇರಲು  ಬೇರೆ ಬೇರೆ ಪಕ್ಷಗಳ ನಾಯಕರೂ  ತೆರೆ ಮರೆಯ ಪ್ರಯತ್ನ ಮಾಡ್ತಿದ್ದಾರೆ.

ಚುನಾವಣೆ ದಿನಾಂಕ ಘೋಷಣೆಯಾದ ಬೆನ್ನಲ್ಲೇ ಬಿಜೆಪಿಯಲ್ಲಿ ಬಿರುಸಿನ ಚಟುವಟಿಕೆ ಶುರುವಾಗಿದೆ.  ಒಂದು ಕಡೆ ಅನ್ಯಪಕ್ಷಗಳ ಪ್ರಮುಖ ನಾಯಕರು ಬಿಜೆಪಿ ಸೇರಲು ತುದಿಗಾಲಲ್ಲಿ ನಿಂತಿದ್ರೆ, ಮತ್ತೊಂದೆಡೆ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಲು  ರಾಜ್ಯ ನಾಯಕರು ದೆಹಲಿಯತ್ತ ಮುಖ ಮಾಡಿದ್ದಾರೆ.

ಕಾಂಗ್ರೆಸ್ ಮುಕ್ತ ಭಾರತ ಮಾಡಲು ಹೊರಟಿರುವ ಬಿಜೆಪಿ ಕಣ್ಣು ಇದೀಗ ಅಭ್ಯರ್ಥಿಗಳ ಘೋಷಣೆಯತ್ತ ನೆಟ್ಟಿದೆ. ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಅಭ್ಯರ್ಥಿಗಳ ಆಯ್ಕೆ ಕಸರತ್ತು ಜೋರಾಗಿಯೇ ನಡೆದಿದೆ. ಇನ್ನೊಂದು ವಾರದಲ್ಲಿ ದೆಹಲಿಗೆ ತೆರಳಲಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೈಕಮಾಂಡ್ ಜೊತೆ ಚರ್ಚಿಸಿ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಲಿದ್ದಾರೆ. ಬಹುತೇಕ ಮುಂದಿನ ವಾರದ ಕೊನೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಲಿದೆ.

ಅಭ್ಯರ್ಥಿಗಳ ಅಂತಿಮ ಪಟ್ಟಿ ಬಿಡುಗಡೆಗೆ ಕ್ಷಣಗಣವೆ ಆರಂಭವಾಗ್ತಿದ್ದ ಹಾಗೆಯೇ  ಬಿಜೆಪಿ ಸೇರಲು  ಬೇರೆ ಬೇರೆ ಪಕ್ಷಗಳ ನಾಯಕರೂ  ತೆರೆ ಮರೆಯ ಪ್ರಯತ್ನ ಮಾಡ್ತಿದ್ದಾರೆ. ಮೀನುಗಾರಿಕಾ ಸಚಿವ ಪ್ರಮೋದ್ ಮದ್ವರಾಜ್ ದೆಹಲಿಗೆ ತೆರಳಿ ಬಿಜೆಪಿಯ ಹಿರಿಯ ನಾಯಕರನ್ನು ಭೇಟಿ ಮಾಡಿ ಬಂದಿದ್ರು. ಆದ್ರೆ ಇದೆಲ್ಲಾ ಕೇವಲ  ವದಂತಿ ಅಷ್ಟೇ ಅಂತಾ ಟ್ವೀಟ್ ಮಾಡಿರುವ ಪ್ರಮೋದ್ ಮದ್ವರಾಜ್  ಈ ವಿಚಾರವನ್ನು ತಳ್ಳಿ ಹಾಕಿದ್ದಾರೆ.

ಕರುನಾಡ ಜಾಗೃತಿ ಯಾತ್ರೆ ಆರಂಭ

ಇನ್ನು ಬೆಂಗಳೂರಿನಲ್ಲಿ ಪಾದಯಾತ್ರೆ ಪರ್ವ ಮುಗಿಸಿರುವ ಬಿಜೆಪಿ ಇದೀಗ ಕರುನಾಡ ಜಾಗೃತಿ ಯಾತ್ರೆ ಆರಂಭಿಸಲಿದೆ.  ನಾಳೆಯಿಂದ ಒಂದು ವಾರ  ಕಾಲ ನಡೆಯಲಿರುವ ಈ ಯಾತ್ರೆ ಯನ್ನು ಬಿಜೆಪಿಯ ಯುವ ಮೋರ್ಚಾದ ಕಾರ್ಯಕರ್ತರು ಪ್ರತಿ ಮನೆಮನೆಗೂ ಭೇಟಿ ನೀಡಿ ಕರಪತ್ರಗಳನ್ನು ಹಂಚುವ ಮೂಲಕ ಪ್ರಚಾರ ನಡೆಸಲಿದ್ದಾರೆ.

ಈ ಬಾರಿಯ ಚುನಾವಣೆಯಲ್ಲಿ ಗದ್ದುಗೆ ಏರಿಯೇ ಸಿದ್ಧ ಅಂತಾ ಕನಸು ಕಾಣ್ತಿರೋ ಬಿಜೆಪಿ ಅಂತಿಮ ಹಂತದ ಸಿದ್ದತೆಯಲ್ಲಿದೆ. ಕರ್ನಾಟಕ ರಣಕಣದಲ್ಲಿ ಸೆಣೆಸಲಿರುವ ಬಿಜೆಪಿಯ ಹುರಿಯಾಳುಗಳು ಯಾರು ಅನ್ನೋದರ ಡೀಟೆಲ್ಸ್ ಗೊತ್ತಾಗಬೇಕಾದ್ರೆ ಇನ್ನೊಂದು ವಾರ ಕಾಯಲೇಬೇಕು.

loader