ಕೇಂದ್ರ ಸಚಿವರು ಹಾಗೂ ಇತರ ನಾಯಕರ ಹೆಸರಿರುವ ಪಟ್ಟಿಯಿಂದ ಬಿಜೆಪಿಯು ಪಕ್ಷದ ಹಿರಿಯ ನಾಯಕರುಗಳಾದ ಲಾಲ್ ಕೃಷ್ಣ ಅಡ್ವಾಣಿ, ಮುರಳಿ ಮನೋಹರ್ ಜೋಷಿ ಅವರ ಹೆಸರುಗಳನ್ನು ಕೈಬಿಡಲಾಗಿದೆ.

ನವದೆಹಲಿ (ಜ.21): ಉತ್ತರ ಪ್ರದೇಶದಲ್ಲಿ ಮುಂದಿನ ತಿಂಗಳು ನಡೆಯಲಿರುವ ಚುನಾವಣೆಗಳಿಗೆ ಬಿಜೆಪಿಯು 'ತಾರಾ ಪ್ರಚಾರಕ'ರ ಪಟ್ಟಿಯನ್ನು ಬಿಡುಗಡೆಮಾಡಿದ್ದು ಘಟಾನುಘಟಿಗಳ ಹೆಸರನ್ನು ಕೈಬಿಟ್ಟಿದೆಯೆಂದು ವರದಿಯಾಗಿದೆ.

ಕೇಂದ್ರ ಸಚಿವರು ಹಾಗೂ ಇತರ ನಾಯಕರ ಹೆಸರಿರುವ ಪಟ್ಟಿಯಿಂದ ಬಿಜೆಪಿಯು ಪಕ್ಷದ ಹಿರಿಯ ನಾಯಕರುಗಳಾದ ಲಾಲ್ ಕೃಷ್ಣ ಅಡ್ವಾಣಿ, ಮುರಳಿ ಮನೋಹರ್ ಜೋಷಿ ಅವರ ಹೆಸರುಗಳನ್ನು ಕೈಬಿಡಲಾಗಿದೆ.

ಯುವಮುಖಂಡ ಹಾಗೂ ಸುಲ್ತಾನಪುರ ಸಂಸದ ವರುಣ್ ಗಾಂಧಿ ಹಾಗೂ ರಾಮಜನ್ಮಭೂಮಿ ಚಳುವಳಿಯ ರೂವಾರಿ ವಿನಯ್ ಕಟಿಯಾರ್ ಅವರ ಹೆಸರನ್ನೂ ಪಟ್ಟಯಿಂದ ಕೈಬಿಡಲಾಗಿದೆ.

ಆದರೆ ವರುಣ್ ಗಾಂಧಿ ತಾಯಿ ಹಾಗೂ ಕೇಂದ್ರ ಸಚಿವೆ ಮನೇಕಾ ಗಾಂಧಿ, ಮತ್ತು ವಿವಾದಾತ್ಮಕ ಮುಖಂಡ ಯೋಗಿ ಆದಿತ್ಯನಾಥ್ ಹೆಸರು ಪಟ್ಟಿಯಲ್ಲಿದೆ.

ಉತ್ತರ ಪ್ರದೇಶ ಚುನಾವಣೆ ವಿಚಾರದಲ್ಲಿ ವರುಣ್ ಗಾಂಧಿ ಪಕ್ಷದ ನಾಯಕರೊಂದಿಗೆ ಅಸಮಾಧಾನ ಹೊಂದಿದ್ದಾರೆ ಎನ್ನಲಾಗಿದೆ.