ಬಿಜೆಪಿಯಿಂದ ಆಯ್ಕೆಯಾದ ರಾಜಸ್ಥಾನದ ಆಲ್ವಾರ್‌’ನ ಕೌನ್ಸಿಲರ್ ಒಬ್ಬರನ್ನು ಸಾರ್ವಜನಿಕರೇ ಹಿಡಿದು ಮರಕ್ಕೆ ಕಟ್ಟಿ ಹೊಡೆದ ಘಟನೆ ಪ್ರಧಾನಿ ಮೋದಿ ಅವರ ತವರು ರಾಜ್ಯ ಗುಜರಾತ್‌ನಲ್ಲಿ ಮಂಗಳವಾರ ನಡೆದಿದೆ.
ಅಹಮದಾಬಾದ್: ಬಿಜೆಪಿಯಿಂದ ಆಯ್ಕೆಯಾದ ರಾಜಸ್ಥಾನದ ಆಲ್ವಾರ್’ನ ಕೌನ್ಸಿಲರ್ ಒಬ್ಬರನ್ನು ಸಾರ್ವಜನಿಕರೇ ಹಿಡಿದು ಮರಕ್ಕೆ ಕಟ್ಟಿ ಹೊಡೆದ ಘಟನೆ ಪ್ರಧಾನಿ ಮೋದಿ ಅವರ ತವರು ರಾಜ್ಯ ಗುಜರಾತ್ನಲ್ಲಿ ಮಂಗಳವಾರ ನಡೆದಿದೆ.
ಇಲ್ಲಿನ ಕೊಳಗೇರಿ ಪ್ರದೇಶದಲ್ಲಿ ತೆರವು ಕಾರ್ಯಾಚರಣೆ ವೇಳೆ ಸ್ಥಳಕ್ಕಾಗಮಿಸಿದ ಕಾರ್ಪೊರೇಟರ್ ಹಸನ್ಮುಖ್ ಪಟೇಲ್ರನ್ನು ಹಿಡಿದ ಸ್ಥಳೀಯರು ಮರಕ್ಕೆ ಕಟ್ಟಿ ಹಾಕಿ, ಪ್ರಶ್ನೆ ಕೇಳಲು ಶುರು ಮಾಡಿ, ಹಲ್ಲೆ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಸ್ಥಳಕ್ಕಾಗಮಿಸಿದ ಸ್ಥಳೀಯ ಪೊಲೀಸರು ಹಸನ್ಮುಖ್ ಪಟೇಲ್ ಅವರನ್ನು ರಕ್ಷಿಸಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ಜನಪ್ರತಿನಿಧಿಯೊಬ್ಬರಿಗೆ ಹಿಡಿದು ಮರಕ್ಕೆ ಕಟ್ಟಿ ಹಾಕಿ, ತರಾಟೆಗೆ ತೆಗೆದುಕೊಳ್ಳುತ್ತಿರುವ ವಿಡಿಯೋ ವೈರಲ್ ಆಗಿದೆ.

