ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಲ್ಲಿ  ಕೇಂದ್ರ ಸರ್ಕಾರ ಮತ್ತು ಆರ್’ಎಸ್’ಎಸ್ ಪಾತ್ರವಿದೆ ಎಂದು ಸಾಹಿತಿ ಚಂಪಾ ಹೇಳಿಕೆ ಹಿನ್ನಲೆಯಲ್ಲಿ ಮಂಡ್ಯದ ಬಿಜೆಪಿ ಕಾರ್ಯಕರ್ತ ಸಿಎಂಗೆ ಪತ್ರ ಬರೆದಿದ್ದಾರೆ.

ಬೆಂಗಳೂರು (ಸೆ.18): ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಲ್ಲಿ ಕೇಂದ್ರ ಸರ್ಕಾರ ಮತ್ತು ಆರ್’ಎಸ್’ಎಸ್ ಪಾತ್ರವಿದೆ ಎಂದು ಸಾಹಿತಿ ಚಂಪಾ ಹೇಳಿಕೆ ಹಿನ್ನಲೆಯಲ್ಲಿ ಮಂಡ್ಯದ ಬಿಜೆಪಿ ಕಾರ್ಯಕರ್ತ ಸಿಎಂಗೆ ಪತ್ರ ಬರೆದಿದ್ದಾರೆ.

ಗೌರಿ ಹತ್ಯೆ ಪ್ರಕರಣದ ತನಿಖೆಯನ್ನು ಎಸ್’ಐಟಿ ಬದಲು CIT( ಚಂಪಾ ಇನ್ವೆಷ್ಟೀಗೇಶನ್ ಟೀಮ್ )ಗೆ ವಹಿಸುವಂತೆ ವ್ಯಂಗ್ಯದ ಪತ್ರ ಬರೆದಿದ್ದಾರೆ.

ಸಾಹಿತಿಯಾಗಿದ್ದುಕೊಂಡು ಕಾಂಗ್ರೆಸ್ ಪಕ್ಷದ ವಕ್ತಾರನಂತೆ ಕೇಂದ್ರ ಸರ್ಕಾರ ಮತ್ತು ಆರ್’ಎಸ್’ಎಸ್ ವಿರುದ್ದ ಮಾಡುತ್ತಿರೋ ಆರೋಪವನ್ನು ಬಿಜೆಪಿ ಕಾರ್ಯಕರ್ತರು ಖಂಡಿಸಿದ್ದಾರೆ.ರಾಜ್ಯ ಸರ್ಕಾರ ಸಾಹಿತಿ ಚಂಪಾರನ್ನು ನೇಮಿಸಿ ಅವರ ಟೀಮಿನಿಂದ ತನಿಖೆ ನಡೆಸಿ ಆದಷ್ಟು ಬೇಗ ಗೌರಿ ಹತ್ಯೆಯ ಹಂತಕರನ್ನು ಬಂಧಿಸಲಿ ಎಂದು ಮಂಡ್ಯದ ಬಿಜೆಪಿ ಕಾರ್ಯಕರ್ತ ಮಂಜುನಾಥ್ ಸಿಎಂಗೆ ಪತ್ರ ಬರೆದಿದ್ದಾರೆ.