ರಾಜ್ಯ ರಾಜಕೀಯದಲ್ಲಿ ಈಗೇನಿದ್ದರೂ ಕೋಲ್ ಪಾಲಿಟಿಕ್ಸ್. ಕಲ್ಲಿದ್ದಲು ಹೆಸರಲ್ಲಿ ಕಾಂಗ್ರೆಸ್- ಬಿಜೆಪಿ ನಾಯಕರು ಪರಸ್ಪರ ಮುಖಕ್ಕೆ ಮಸಿ ಎರೆಚಿಕೊಳ್ಳುವ ಕೆಲಸದಲ್ಲಿ ತೊಡಗಿದ್ದಾರೆ.

ಬೆಂಗಳೂರು (ಅ.22): ರಾಜ್ಯ ರಾಜಕೀಯದಲ್ಲಿ ಈಗೇನಿದ್ದರೂ ಕೋಲ್ ಪಾಲಿಟಿಕ್ಸ್. ಕಲ್ಲಿದ್ದಲು ಹೆಸರಲ್ಲಿ ಕಾಂಗ್ರೆಸ್- ಬಿಜೆಪಿ ನಾಯಕರು ಪರಸ್ಪರ ಮುಖಕ್ಕೆ ಮಸಿ ಎರೆಚಿಕೊಳ್ಳುವ ಕೆಲಸದಲ್ಲಿ ತೊಡಗಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ನಿನ್ನೆ ಕಾಂಗ್ರೆಸ್ ಸರ್ಕಾರದ ವಿರುದ್ಧ ದಾಖಲೆ ಸಮೇತ ಕಲ್ಲಿದ್ದಲು ಹಗರಣದ ಆರೋಪ ಹೊರಿಸಿದ್ದಾರೆ. ರಾಜ್ಯಕ್ಕೆ ಕೋಟಿ ಕೋಟಿ ವಂಚನೆ ಮಾಡಿದ್ದಾರೆಂದು ಬಿಎಸ್​ವೈ ಆರೋಪ ಹೊರಿಸುತ್ತಲೇ ಕಾಂಗ್ರೆಸ್-ಬಿಜೆಪಿ ಮಧ್ಯೆ ರಾಜ್ಯದಲ್ಲಿ ಕೋಲ್ ವಾರ್ ಶುರುವಾಗಿದೆ.

 ಬೀದರ್​ನ ಬಸವ ಕಲ್ಯಾಣದಲ್ಲಿ ಮಾತನಾಡಿದ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಭ್ರಷ್ಟಾಚಾರದಲ್ಲಿ ಸಿದ್ದರಾಮಯ್ಯ ಸರ್ಕಾರ ನಂಬರ್ ಒನ್. ಚುನಾವಣೆಗೆ ಹಣ ಹಂಚೋಕೆ ಈ ಮೂಲಕ ಕಲೆಕ್ಷನ್ ಆರಂಭಿಸಿದ್ದಾರೆಂದು ಗಂಭೀರ ಆರೋಪ ಮಾಡಿದ್ದಾರೆ. ಇನ್ನೂ ಹುಬ್ಬಳ್ಳಿಯಲ್ಲಿ ಬಿಜೆಪಿ ಸಂಸದ ಪ್ರಹ್ಲಾದ್ ಜೋಶಿ ಕೂಡ ಕಿಡಿಕಾರಿದ್ದು ರಾಜ್ಯ ಸರ್ಕಾರ ತಪ್ಪು ಮಾಡಿಲ್ಲ ಎಂದರೆ ಸಿಬಿಐಗೆ ಒಪ್ಪಿಸಲಿ ಎಂದು ಆಗ್ರಹಿಸಿದ್ದಾರೆ. ಬಿಜೆಪಿ ಕಲ್ಲಿದ್ದಲು ಆರೋಪದ ಬಳಿಕ ಇದೇ ಮೊದಲ ಬಾರಿಗೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ ಬಂಟ್ವಾಳದಲ್ಲಿ ಖಾರವಾಗೇ ತಿರುಗೇಟು ನೀಡಿದ್ದಾರೆ. ತನ್ನನ್ನು ತಾನು ನಂಬದ ಕಳ್ಳರಿಂದ ಮಾತ್ರ ಈ ರೀತಿ ಆರೋಪ ಸಾಧ್ಯ ಎಂದು ವಾಗ್ಧಾಳಿ ನಡೆಸಿದ್ದಾರೆ.

ಒಟ್ಟಿನಲ್ಲಿ, ಚುನಾವಣಾ ಹೊಸ್ತಿಲಲ್ಲಿ ಕೋಲ್ ವಾರ್ ಶುರುವಾಗಿದ್ದು, ಬಿಜೆಪಿ-ಕಾಂಗ್ರೆಸ್ ನಡುವಿನ ಈ ಆರೋಪ.. ಇನ್ನಷ್ಟು ಹಗರಣಗಳನ್ನು ಬಯಲಿಗೆಳೆದರೂ ಅಚ್ಚರಿಯಿಲ್ಲ.